ಇದು ಅನಿರೀಕ್ಷಿತ ಫಲಿತಾಂಶ; ಜನರ ತೀರ್ಪನ್ನು ಸ್ವೀಕರಿಸುತ್ತೇವೆ: ಯೋಗಿ ಆದಿತ್ಯನಾಥ

7

ಇದು ಅನಿರೀಕ್ಷಿತ ಫಲಿತಾಂಶ; ಜನರ ತೀರ್ಪನ್ನು ಸ್ವೀಕರಿಸುತ್ತೇವೆ: ಯೋಗಿ ಆದಿತ್ಯನಾಥ

Published:
Updated:
ಇದು ಅನಿರೀಕ್ಷಿತ ಫಲಿತಾಂಶ; ಜನರ ತೀರ್ಪನ್ನು ಸ್ವೀಕರಿಸುತ್ತೇವೆ: ಯೋಗಿ ಆದಿತ್ಯನಾಥ

ಗೋರಖಪುರ: ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರಿಂದ ತೆರವಾದ ಫುಲ್‌‍ಪುರ್ ಲೋಕಸಭಾ ಕ್ಷೇತ್ರಕ್ಕೆ ನಡೆದಿದ್ದ ಉಪಚುನಾವಣೆಯಲ್ಲಿ ಸಮಾಜವಾದಿ ಪಕ್ಷ(ಎಸ್‌ಪಿ) ಗೆಲುವು ಸಾಧಿಸಿದೆ.

ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷ(ಬಿಎಸ್‌ಪಿ) ಗೋರಖಪುರ ಮತ್ತು ಫುಲ್‌ಪುರ್‌ ಲೋಕಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಎಸ್‌ಪಿ ಅಭ್ಯರ್ಥಿಗಳಿಗೆ ಬೆಂಬಲ ನೀಡಿತ್ತು. ಈಗಾಗಲೇ ಫುಲ್‌ಪುರ್‌ ಎಸ್‌ಪಿ ಪಾಲಾಗಿದ್ದು, ಗೋರಖಪುರದಲ್ಲಿಯೂ ಎಸ್‌ಪಿ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ.

ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಠೇವಣಿ ಕಳೆದುಕೊಂಡಿದೆ.

ಗೆಲುವು ಪಡೆದ ಅಭ್ಯರ್ಥಿಗಳನ್ನು ಅಭಿನಂದಿಸಿರುವ ಸಿಎಂ ಯೋಗಿ ಆದಿತ್ಯನಾಥ, ‘ಎಸ್‌ಪಿ–ಬಿಎಸ್‌ಪಿ ಜತೆಗೂಡಿದ್ದರ ಪರಿಣಾಮದರ ಬಗ್ಗೆ ಬಿಜೆಪಿ ಕಡಿಮೆ ಅಂದಾಜಿಸಿತ್ತು. ಅತಿಯಾದ ಭರವಸೆಯಿಂದಾಗಿ ಸೋಲು ಕಾಣಬೇಕಾಯಿತು. ಈ ಫಲಿತಾಂಶ ಅನಿರೀಕ್ಷಿತವಾದುದು, ಜನರ ತೀರ್ಪನ್ನು ಒಪ್ಪಿಕೊಳ್ಳುತ್ತೇನೆ’ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry