ಕಾರ್ಕಳ ಈದು ಎನ್‌ಕೌಂಟರ್ ಪ್ರಕರಣ: ಆರೋಪಿ ದೇವೇಂದ್ರ ಖುಲಾಸೆ

ಮಂಗಳವಾರ, ಮಾರ್ಚ್ 19, 2019
20 °C

ಕಾರ್ಕಳ ಈದು ಎನ್‌ಕೌಂಟರ್ ಪ್ರಕರಣ: ಆರೋಪಿ ದೇವೇಂದ್ರ ಖುಲಾಸೆ

Published:
Updated:
ಕಾರ್ಕಳ ಈದು ಎನ್‌ಕೌಂಟರ್ ಪ್ರಕರಣ: ಆರೋಪಿ ದೇವೇಂದ್ರ ಖುಲಾಸೆ

ಉಡುಪಿ: ಕಾರ್ಕಳದ ಈದು ನಕ್ಸಲ್‌ ಎನ್‌ಕೌಂಟರ್ ಪ್ರಕರಣದ ಆರೋಪಿ ಶಿವಮೊಗ್ಗದ ದೇವೇಂದ್ರ ಅವರನ್ನು ಖುಲಾಸೆಗೊಳಿಸಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ ಬುಧವಾರ ಆದೇಶ ಹೊರಡಿಸಿತು. ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಈ ಪ್ರಕರಣದಲ್ಲಿ ಹಾಜಿಮಾ ಮತ್ತು ಪಾರ್ವತಿ ಎಂಬುವರು ಪೊಲೀಸರ ಗುಂಡಿಗೆ ಬಲಿಯಾಗಿದ್ದರು. ಪೊಲೀಸರು ಸಹ ಗಾಯಗೊಂಡಿದ್ದರು.

2009ರಲ್ಲಿ ಬಂಧನಕ್ಕೊಳಗಾಗಿ ಸುಮಾರು ಎಂಟು ವರ್ಷಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದ ದೇವೇಂದ್ರ ಅವರಿಗೆ ಹೈಕೋರ್ಟ್‌ ಏಳು ತಿಂಗಳ ಹಿಂದೆ ಷರತ್ತುಬದ್ಧ ಜಾಮೀನು ನೀಡಿತ್ತು. ಆದೇಶ ಪ್ರಕಟಿಸುವ ವೇಳೆ ಅವರು ನ್ಯಾಯಾಲಯದಲ್ಲಿ ಹಾಜರಿದ್ದರು. ‘ನ್ಯಾಯಕ್ಕೆ ಜಯ ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧವೇ ಇಲ್ಲದ ನನ್ನನ್ನು  ಆರೋಪಿಯನ್ನಾಗಿಸಿ ಬಂಧಿಸಲಾಗಿತ್ತು. ಮಾಡದ ತಪ್ಪಿಗೆ ಜೈಲು ವಾಸ ಅನುಭವಿಸಬೇಕಾಯಿತು’ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry