ಇದು ಅನಿರೀಕ್ಷಿತ ಫಲಿತಾಂಶ; ಜನರ ತೀರ್ಪನ್ನು ಸ್ವೀಕರಿಸುತ್ತೇವೆ: ಯೋಗಿ ಆದಿತ್ಯನಾಥ

7

ಇದು ಅನಿರೀಕ್ಷಿತ ಫಲಿತಾಂಶ; ಜನರ ತೀರ್ಪನ್ನು ಸ್ವೀಕರಿಸುತ್ತೇವೆ: ಯೋಗಿ ಆದಿತ್ಯನಾಥ

Published:
Updated:
ಇದು ಅನಿರೀಕ್ಷಿತ ಫಲಿತಾಂಶ; ಜನರ ತೀರ್ಪನ್ನು ಸ್ವೀಕರಿಸುತ್ತೇವೆ: ಯೋಗಿ ಆದಿತ್ಯನಾಥ

ಗೋರಖಪುರ: ಉತ್ತರ ಪ್ರದೇಶದ ಗೋರಖಪುರ ಮತ್ತು ಫುಲ್‌ಪುರ್‌ ಎರಡೂ ಲೋಕಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಸಮಾಜವಾದಿ ಪಕ್ಷ(ಎಸ್‌ಪಿ)  ಗೆಲುವು ಸಾಧಿಸಿದೆ.

ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರಿಂದ ತೆರವಾದ ಫುಲ್‌‍ಪುರ್  ಹಾಗೂ ಸಿಎಂ ಯೋಗಿ ಆದಿತ್ಯನಾಥ ಅವರಿಂದ ತೆರವಾಗಿದ್ದ ಗೋರಖಪುರ ಕ್ಷೇತ್ರಗಳು ಉಪಚುನಾವಣೆಯಲ್ಲಿ ಬಿಜೆಪಿ ಕೈತಪ್ಪಿವೆ.

ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷ(ಬಿಎಸ್‌ಪಿ) ಗೋರಖಪುರ ಮತ್ತು ಫುಲ್‌ಪುರ್‌ ಲೋಕಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಎಸ್‌ಪಿ ಅಭ್ಯರ್ಥಿಗಳಿಗೆ ಬೆಂಬಲ ನೀಡಿತ್ತು.

ಗೋರಖಪುರದಲ್ಲಿ ಎಸ್‌ಪಿ ಅಭ್ಯರ್ಥಿ ಪ್ರವೀಣ್‌ ನಿಶಾದ್‌ 21,961 ಮತಗಳ ಅಂತರದಿಂದ ಗೆಲುವು ಪಡೆದರೆ, ಫುಲ್‌ಪುರ್‌ನಲ್ಲಿ ಎಸ್‌ಪಿಯ ನಾಗೇಂದ್ರ ಪ್ರತಾಪ್‌ ಸಿಂಗ್‌ ಬಿಜೆಪಿಯ ಕೌಶಲೇಂದ್ರ ಸಿಂಗ್‌ ಪಟೇಲ್‌ ವಿರುದ್ಧ 59,460 ಮತಗಳ ಅಂತರದ ಜಯ ಸಾಧಿಸಿದರು.

ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಠೇವಣಿ ಕಳೆದುಕೊಂಡಿದೆ.

ಗೆಲುವು ಪಡೆದ ಅಭ್ಯರ್ಥಿಗಳನ್ನು ಅಭಿನಂದಿಸಿರುವ ಸಿಎಂ ಯೋಗಿ ಆದಿತ್ಯನಾಥ, ‘ಎಸ್‌ಪಿ–ಬಿಎಸ್‌ಪಿ ಮೈತ್ರಿಯ ಪರಿಣಾಮದ ಬಗ್ಗೆ ಬಿಜೆಪಿ ಕಡೆಗಣಿಸಿತ್ತು. ಅತಿಯಾದ ಭರವಸೆಯಿಂದಾಗಿ ಸೋಲು ಕಾಣಬೇಕಾಯಿತು. ಈ ಫಲಿತಾಂಶ ಅನಿರೀಕ್ಷಿತವಾದುದು, ಜನರ ತೀರ್ಪನ್ನು ಒಪ್ಪಿಕೊಳ್ಳುತ್ತೇನೆ’ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry