ಸುಟ್ಟ ಬಟ್ಟೆಗಳ ಫ್ಯಾಷನ್‌!

ಬುಧವಾರ, ಮಾರ್ಚ್ 27, 2019
22 °C

ಸುಟ್ಟ ಬಟ್ಟೆಗಳ ಫ್ಯಾಷನ್‌!

Published:
Updated:
ಸುಟ್ಟ ಬಟ್ಟೆಗಳ ಫ್ಯಾಷನ್‌!

ಹೊಸ ವಿನ್ಯಾಸದ ವಸ್ತ್ರಗಳನ್ನೋ, ಆಭರಣಗಳನ್ನೋ ಅಥವಾ ಯಾವುದಾದರೂ ಹೊಸ ಉತ್ಪನ್ನಗಳನ್ನೋ ಪರಿಚಯಿಸಲು ವೇದಿಕೆಯಾಗುವುದು ಫ್ಯಾಷನ್‌ ಶೋ. ಅದೂ ಈಗ ಜಗತ್ತಿನಾದ್ಯಂತ ಹಲವು ವಿನ್ಯಾಸಕರ ಕ್ರಿಯಾಶೀಲತೆಗೆ ಕನ್ನಡಿ ಹಿಡಿಯುವ ಪ್ಯಾರಿಸ್ ಫ್ಯಾಷನ್‌ ವೀಕ್ ನಡೆಯುತ್ತಿರುವ ಸಮಯ ಕೂಡ.

ಈ ಬಾರಿಯೂ ಪ್ಯಾರಿಸ್ ಫ್ಯಾಷನ್‌ ಶೋನಲ್ಲಿ ಸಾವಿರಾರು ರೀತಿಯ ವಸ್ತ್ರಗಳು ಗಮನ ಸೆಳೆದವು. ಅವುಗಳಲ್ಲಿ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿರುವುದೇ ಈ ‘ಬರ್ನ್ಟ್ ಫ್ಯಾಷನ್’ ವಸ್ತ್ರಗಳು.

ಸುಟ್ಟ ಹಾಗೆ ಕಾಣುವ ಬಟ್ಟೆಗಳ ವಿನ್ಯಾಸವೇ ಈ ಪರಿಕಲ್ಪನೆಯ ಹಿಂದಿರುವುದು. ಅರೆ ಸುಟ್ಟಂತೆ ಕಾಣುವ ವಿನ್ಯಾಸವನ್ನು ಬಟ್ಟೆ ಮೇಲೆ ಪ್ರಯೋಗಿಸಿರುವುದು ಬರ್ಲಿನ್‌ನ ಒಟ್ಟೊಲಿಂಗರ್ ಬ್ರ್ಯಾಂಡ್.

ಸುಟ್ಟಂತೆ ಕಾಣುವ ಬಟ್ಟೆಗಳೊಂದಿಗೆ ಕರಗಿಹೋಗುತ್ತಿರುವಂತೆ ಕಾಣುವ ಬ್ಯಾಗ್‌ಗಳೂ (ಮೆಲ್ಟಿಂಗ್ ಬ್ಯಾಗ್‌) ಇದ್ದವು.

ಲಾಂಗ್ ಸ್ಕರ್ಟ್, ಕಾಲರ್ ಟಾಪ್‌ಗಳು, ಸ್ವೆಟರ್‌, ಬಟನ್ ಡೌನ್ ಶರ್ಟ್, ಮೀನಿಯೇಚರ್ ಬ್ಯಾಗ್‌, ಡೆಮಿಮ್ ಪೀಸ್‌ಗಳೆಲ್ಲದರಲ್ಲೂ ಸುಟ್ಟು ಹೋದ ಕಲೆಯೇ. ಈ ಸಂಗ್ರಹ ಲ್ಯೂಯಿಸ್ ವ್ಯೂಟನ್‌ನ ಫ್ಯಾಷನ್ ಹೌಸ್‌ನ ಪ್ರಶಸ್ತಿಗೂ ನಾಮಿನೇಟ್ ಆಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry