ಹಳೇ ರೀಲಿಗೆ ಹೊಸ ನೋಟ

ಬುಧವಾರ, ಮಾರ್ಚ್ 20, 2019
31 °C

ಹಳೇ ರೀಲಿಗೆ ಹೊಸ ನೋಟ

Published:
Updated:
ಹಳೇ ರೀಲಿಗೆ ಹೊಸ ನೋಟ

ಕನ್ನಡಕದಲ್ಲಿ ಈಗ ಸಾವಿರಾರು ಬ್ರ್ಯಾಂಡ್‌ಗಳು. ದಿನಕ್ಕೊಂದರಂತೆ ಅವುಗಳಲ್ಲಿ ಹಲವು ವಿನ್ಯಾಸ. ಆದರೆ ಈ ಎಲ್ಲಾ ಸಿದ್ಧ ಮಾದರಿಗಳಿಂದ ಹೊರಬಂದು ಕನ್ನಡಕಕ್ಕೆ ಬೇರೆಯದೇ ರೂಪ ನೀಡಬೇಕೆಂದುಕೊಂಡಿದ್ದು ಸಿನಿಮ್ಯಾಟಿಕ್ ಐವೇರ್ ಬ್ರ್ಯಾಂಡ್.

ಇದಕ್ಕೆ ಈ ತಂಡ ಆರಿಸಿಕೊಂಡಿದ್ದು ಹಳೆಯ ಫಿಲ್ಮ್ ರೀಲ್‌ ಗಳನ್ನು. ಸಿನಿಮಾ ಇಷ್ಟಪಡುವ ಕನ್ನಡಕಧಾರಿಗಳಿಗೆ ಇದನ್ನು ರೂಪಿಸಲಾಗಿದೆಯಂತೆ. ಇದಕ್ಕೆ ‘ಸಿನಿಮ್ಯಾಟಿಕ್ ಐಗ್ಲಾಸ್’ ಎಂದು ಹೆಸರಿಟ್ಟಿದ್ದಾರೆ.

16 ಮತ್ತು 35ಎಂಎಂ ಫಿಲ್ಮ್‌ಗಳಿಂದ ಈ ಗ್ಲಾಸ್‌ ಬದಿಗಳ ಫ್ರೇಮ್‌ಗಳನ್ನು ರೂಪಿಸಲಾಗಿದೆ. ಹಳೆಯ ಮೂವಿ ಥಿಯೇಟರ್‌ಗಳಿಂದ, ಟಿ.ವಿ ಸ್ಟೇಷನ್ ಹಾಗೂ ಕೆಲ ವೈಯಕ್ತಿಕ ಸಂಗ್ರಹಗಳಿಂದ ಈ ಫಿಲ್ಮ್‌ಗಳನ್ನು ಸಂಗ್ರಹಿಸಲಾಗಿದೆ. ಇವು ಶೋಗನ್ ಶ್ಯಾಡೊ (1989) ಹಾಗೂ ಫಿಸ್ಟ್‌ ಆಫ್‌ ದಿ ಡಬಲ್ ಕೆ (1973) ಚಿತ್ರದ ಅಸಲಿ ಫುಟೇಜ್‌ಗಳು.

ಸಿನಿಮಾಟಿಕ್ ಐವೇರ್‌ನ ಸ್ಥಾಪಕ ಜಚಾರಿ ಟಿಪ್ಟನ್, ಮೊದಲು 2005ರಲ್ಲಿ ಈ ಪ್ರಯೋಗವನ್ನು ಮಾಡಿದ್ದರು. ಇದು ಸೀಮಿತ ಆವೃತ್ತಿಯಲ್ಲಿ ಹೊರಬಂದಿತ್ತು. ಈಗ ಮತ್ತೆ ಇದರ ಪ್ರಯೋಗ ನಡೆಸಿ, ಹೊಸ ಸಂಗ್ರಹವನ್ನು ಪರಿಚಯಿಸಿದ್ದಾರೆ.

ಈ ಕನ್ನಡಕಕ್ಕೆ ಬಳಸಿರುವ ಎರಡೂ ಸಿನಿಮಾಗಳ ರೀಲ್‌ಗಳಲ್ಲಿ ನೈಸರ್ಗಿಕ ಬೆಳಕಿನಲ್ಲಿ ಮೂಡಿಬಂದ ಸಾಕಷ್ಟು ದೃಶ್ಯಗಳಿದ್ದು, ಇವು ಬರಿಗಣ್ಣಿಗೇ ಸ್ಪಷ್ಟವಾಗಿ ಗೋಚರಿಸುವಂತಿವೆ. ಲ್ಯಾಮಿನೇಷನ್‌ನ ವಿಶೇಷ ಪ್ರಕ್ರಿಯೆ, ಲೇಸರ್‌ ಕಟ್‌ಗಳಿಂದ ಈ ರೀಲ್‌ನ ಸೂಕ್ಷ್ಮತೆ ಹಾಳಾಗದಂತೆ ಮಾಡಲಾಗಿದೆ. ಇದನ್ನು ಸ್ಟೀಲ್ ಫ್ರೇಮ್‌ನಲ್ಲಿ ಅಳವಡಿಸಲಾಗಿದೆ. ಮೈಲುಗಟ್ಟಲೆ ಇರುವ ಫ್ರೇಮ್‌ಗಳನ್ನು ಅತಿ ಸೂಕ್ಷ್ಮವಾಗಿ ಆರಿಸಿರುವ ತಂಡ, ಕನ್ನಡಕದ ವಿನ್ಯಾಸಕ್ಕೆ ಹೊಂದಿಕೊಳ್ಳುವಂಥ ದೃಶ್ಯವನ್ನೇ ಅಳವಡಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry