15ರ ಸಂಭ್ರಮದಲ್ಲಿ ಗ್ಯಾಲರಿ ‘ಜಿ’

7

15ರ ಸಂಭ್ರಮದಲ್ಲಿ ಗ್ಯಾಲರಿ ‘ಜಿ’

Published:
Updated:
15ರ ಸಂಭ್ರಮದಲ್ಲಿ ಗ್ಯಾಲರಿ ‘ಜಿ’

ಗ್ಯಾಲರಿ ಜಿ ತನ್ನ 15ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಇದರ ಅಂಗವಾಗಿ ನಡೆದ ‘ಆರ್ಟಿಸ್ಟ್ಸ್ ಇನಿಷಿಯೇಟಿವ್ ಪ್ರೋಗ್ರಾಮ್’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ 15 ಕಲಾವಿದರ ಕಲಾಕೃತಿಗಳು ಈ ಪ್ರದರ್ಶನದಲ್ಲಿವೆ. ಹೊಸ ಕಲಾವಿದರಿಗೆ ವೇದಿಕೆ ಕಲ್ಪಿಸಿ, ಕಲಾಕೃತಿಗಳ ಮಾರಾಟಕ್ಕೆ ಗ್ಯಾಲರಿ ಜಿ ಅನುವು ಮಾಡಿಕೊಟ್ಟಿದೆ.

ಒಂದು ತಿಂಗಳ ಅವಧಿಯ ಪ್ರದರ್ಶನದಲ್ಲಿ ಗಣಪತಿ ಹೆಗಡೆ, ಹನ್ಸಾ ಮಿಲನ್, ಪೂನಮ್ ಅಗರ್‌ವಾಲ್, ಸುಜಾತಾ, ರಾಮಚಂದ್ರ ಖಾರತಿಮಾಲ್, ನಿತನ್ ನಂಗರೆ, ಬುವಾ ಶೇಟ್, ಪ್ರದೀಪ್ ದಾಸ್, ಮೊಹಮದ್ ಓಸ್ಮಾನ್, ಪಾರ್ಥಶ್ರೀ, ರಾಜಾ ರಾಘವನ್, ಉಪೇಂದ್ರನಾಥ್, ಸುರೇಶ್ ಗುಲಾಗಿ ಅವರ ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ.

ತೈಲವರ್ಣ, ಅಕ್ರೆಲಿಕ್, ಮಿಕ್ಸ್ ಮೀಡಿಯಾ, ರೇಖಾಚಿತ್ರ, ಜಲವರ್ಣ ಸೇರಿದಂತೆ ಹಲವು ಮಾಧ್ಯಮದ ಚಿತ್ರಕಲೆಗಳಿವೆ. ಕೊನೆಯದಿನ ಮಾರ್ಚ್‌ 26. ಸ್ಥಳ– ಗ್ಯಾಲರಿ ಜಿ, ಲ್ಯಾವೆಲ್ಲೆ ರಸ್ತೆ. ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry