ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಬಾಗಿಲಿಗೆ ತಾಜಾ ಹಣ್ಣು–ತರಕಾರಿ

Last Updated 14 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ತರಕಾರಿ ಕೊಳ್ಳುವಾಗ ಅಯ್ಯೋ ಇದು ಬೇಡಪ್ಪ ಬಾಡಿ ಹೋಗಿದೆ. ಇದು ಪರವಾಗಿಲ್ಲ ಸುಮರಾಗಿದೆ,ಎನ್ನುವ ಅಯ್ಕೆಗಳು ನಮ್ಮ ಮನದಲ್ಲಿ ಮಿಸುಕಾಡಿ ಕೊನೆಗೆ ಒಳ್ಳೆಯ ತರಕಾರಿಯತ್ತ ನಮ್ಮ ಕೈ ಮನಸ್ಸುಗಳು ತುಡಿಯುತ್ತದೆ. ಎಲ್ಲ ತರಕಾರಿಗಳು ತಾಜಾವಾಗಿದ್ದಾರೆ ಹೇಗೆ? ಸಾಧ್ಯನಾ? ತರಕಾರಿಗಳನ್ನು ಗಿಡದಿಂದ ಬಿಡಿಸಿಕೊಂಡು ಬಂದ ಹಾಗೆ ನಮ್ಮ ಕೈಗೆ ಸಿಗುವಂತೆ ಇದ್ದರೆ? ಅಯ್ಯೋ ಬಿಡ್ರಿ ಅದೆಲ್ಲ ಸಾಧ್ಯವಿಲ್ಲ ಅನ್ನುತ್ತೀರಾ? ಇಂತಹ ಪ್ರಶ್ನೆಗಳನ್ನು ಇಟ್ಟುಕೊಂಡು ಹೆಸರಘಟ್ಟದ ಭಾರತೀಯ ತೋಟಗಾರಿಕೆ ಸಂಸ್ಥೆ ಮತ್ತು ಕರ್ನಾಟಕ ರಾಜ್ಯ ತೋಟಗಾರಿಕ ಮಾರಾಟ ಮಹಾಮಂಡಳಿ ತಾಜಾ ಹಣ್ಣು ಮತ್ತು ತರಕಾರಿಗಳನ್ನು ಮಾರಾಟ ಮಾಡುವ ವಾಹನವೊಂದನ್ನು ಅವಿಷ್ಕಾರ ಮಾಡಿದೆ.

ಟಾಟಾ ಎಸಿಯ ಡಿಸೇಲ್ ಚಾಲಿತ ಈ ವಾಹನವು ತರಕಾರಿ ಮತ್ತು ಹಣ್ಣುಗಳನ್ನು ತಾಜಾತನವಾಗಿ ನಿಮ್ಮ ಕೈಗೆ ನೀಡುತ್ತದೆ. ಪಿ.ಎಫ್.ಎಫ್. ನಿರೋಧಕ ಪಟ್ಟಿಯನ್ನು ಐವತ್ತು ಎಂ.ಎಂ.ಗಳಲ್ಲಿ ವಾಹನದ ಎರಡು ಬಾಗಿಲಿಗಳಲ್ಲಿ ಅಳವಡಿಸಲಾಗಿದೆ. ಹಣ್ಣು ಮತ್ತು ತರಕಾರಿಗಳನ್ನು ಪುಡ್ ಗ್ರೇಡ್ ಕ್ರೇಟ್‍ಗಳಲ್ಲಿ ಇಟ್ಟುಕೊಳ್ಳುವ ವ್ಯವಸ್ಥೆ ಇದರಲ್ಲಿದೆ. ಹಣ್ಣು ಮತ್ತು ತರಕಾರಿಗಳನ್ನು ಪರಿಸರದ ಉಷ್ಟಾಂಶದಿಂದ ರಕ್ಷಿಸುವ ಸಲುವಾಗಿ ಶೀತಕ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಈ ವ್ಯವಸ್ಥೆಯು ನೀರನ್ನು ಅವಿಯಾಗಿ ಹೆಚ್ಚಿನ ಅರ್ದತೆಯನ್ನು ನೀಡುತ್ತದೆ. ಇದಕ್ಕಾಗಿ ಎರಡು ದಿನಕ್ಕೆ ಸುಮಾರು ಇಪ್ಪತ್ತು ಲೀಟರ್ ನೀರನ್ನು ಉಪಯೋಗಿಸಲಾಗುತ್ತದೆ. ವಾತಾವರಣವನ್ನು ತಂಪಾಗಿಸಲು ಬಾಗಿಲು ಎರಡು ಕಡೆ ಪ್ಯಾನ್ ಗಳನ್ನು ಅಳವಡಿಸಿದ್ದು, ಇದು ವಾತಾವರಣದ ಬಿಸಿಯನ್ನು ತಗ್ಗಿಸುತ್ತದೆ. ವಾಹನದ ಹಿಂದೆ 38 ಇಂಚಿನ ಎಲ್.ಸಿ.ಡಿ. ಟಿ.ವಿ.ಯನ್ನು ಅಳವಡಿಸಿದ್ದು ಇದರಲ್ಲಿ ಇಂದಿನ ಮಾರುಕಟ್ಟೆಯ ದರವನ್ನು ಪ್ರದರ್ಶಿಸಲಾಗುತ್ತದೆ. ಗ್ರಾಹಕರಿಗೆ ಅಡಿಯೋ ಮತ್ತು ವಿಡಿಯೋಗಳ ಮೂಲಕ ಮಾರುಕಟ್ಟೆಯ ವಿಷಯಗಳನ್ನು ತಿಳಿಸಲಾಗುತ್ತದೆ.

ಈ ಎಲ್ಲ ಚಟುವಟಿಕೆಗಳಿಗೆ ಬೇಕಾದ ವಿದ್ಯುತ್‍ನ್ನು ಪಡೆಯಲು ಸೌರಶಕ್ತಿಯನ್ನು ಬಳಸಲಾಗುತ್ತಿದೆ. ಎಂಟು ಘಂಟೆಗಳ ಬ್ಯಾಕ್ ಅಪ್ ಹೊಂದಿರುವ 600 ವ್ಯಾಟ್ ಸೌರ ಪೋಟೋ ವೋಲ್ಟೇಕ್ ಸಿಸ್ಟಮ್‍ನ್ನು ಅಳವಡಿಸಲಾಗಿದೆ.

ಡಾ. ಸಂಥಿಲ್ ಕುಮಾರ್ ಮತ್ತು ಡಾ.ಭುವನೇಶ್ವರಿ,ಡಾ.ರಥನಕುಮಾರಿ, ಡಾ.ಕ್ಯಾರೋಲಿನ್ ತಂಡವು ಈ ವಾಹನವನ್ನು ಸಂಶೋಧಿಸಿದ್ದು,ತೋಟಗಾರಿಕೆ ಮೇಳದಲ್ಲಿ ಇದು ಲಭ್ಯವಿದೆ. ಹೆಚ್ಚಿನ ಮಾಹಿತಿಗೆ ತೋಟಗಾರಿಕೆ ಮೇಳಕ್ಕೆ ಬನ್ನಿ.

ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT