ಈ ವಾರದಿಂದ ಸಿನಿಮಾ ಬಿಡುಗಡೆ

7

ಈ ವಾರದಿಂದ ಸಿನಿಮಾ ಬಿಡುಗಡೆ

Published:
Updated:

ಬೆಂಗಳೂರು: ಶುಕ್ರವಾರದಿಂದ ಮಾರ್ಚ್‌ 30ರವರೆಗೆ ಕನ್ನಡ ಚಲನಚಿತ್ರಗಳ ಬಿಡುಗಡೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ತಾತ್ಕಾಲಿಕ ವ್ಯವಸ್ಥೆ ರೂಪಿಸಿದ್ದು, ಸಿನಿಮಾ ಪ್ರದರ್ಶನದ ಡಿಜಿಟಲ್ ಸೇವೆ ಪೂರೈಕೆದಾರ ಕಂಪನಿಗಳಾದ ಯುಎಫ್‌ಒ ಮತ್ತು ಕ್ಯೂಬ್‌ ವಿರುದ್ಧದ ನಿರ್ಬಂಧವನ್ನು ತಾತ್ಕಾಲಿಕವಾಗಿ ತಡೆ ಹಿಡಿದಿದೆ.

ನಿರ್ಬಂಧದ ಕಾರಣ ಮಾರ್ಚ್‌ 9ರಿಂದ ಹೊಸ ಕನ್ನಡ ಚಿತ್ರಗಳು ತೆರೆ ಕಂಡಿರಲಿಲ್ಲ.

‘ಕಂಪನಿಗಳ ಪ್ರತಿನಿಧಿಗಳ ಜೊತೆ ಮಂಗಳವಾರ ಸಭೆ ನಡೆಯಿತು. ಅವರು ಹದಿನೈದು ದಿನಗಳ ಕಾಲಾವಕಾಶ ಕೇಳಿದ್ದಾರೆ. ಅಲ್ಲಿಯವರೆಗೆ ಸಿನಿಮಾಗಳನ್ನು ಬಿಡುಗಡೆ ಮಾಡಬೇಕು, ಶುಲ್ಕದ ವಿವಾದ ಈ ಅವಧಿಯಲ್ಲಿ ಸೌಹಾರ್ದಯುತವಾಗಿ ಬಗೆಹರಿಯದಿದ್ದರೆ, ಹದಿನೈದು ದಿನಗಳ ಅವಧಿಯಲ್ಲಿ ಬಿಡುಗಡೆ ಮಾಡಿದ ಸಿನಿಮಾಗಳಿಗೆ ಪಡೆದ ಶುಲ್ಕದಲ್ಲಿ ಅರ್ಧದಷ್ಟನ್ನು ಹಿಂದಿರುಗಿಸಲಾಗುವುದು ಎಂದು ಕಂಪನಿ ಪ್ರತಿನಿಧಿಗಳು ಹೇಳಿದ್ದಾರೆ’ ಎಂದು ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry