ಏ.16ರಿಂದ ಪ್ರಥಮ ಪಿಯು ಪೂರಕ ಪರೀಕ್ಷೆ

7

ಏ.16ರಿಂದ ಪ್ರಥಮ ಪಿಯು ಪೂರಕ ಪರೀಕ್ಷೆ

Published:
Updated:

ಬೆಂಗಳೂರು: ಪ್ರಸಕ್ತ ಸಾಲಿನ ಪ್ರಥಮ ಪಿಯು ಪೂರಕ ಪರೀಕ್ಷೆ ಏಪ್ರಿಲ್‌ 16ರಿಂದ 28ರವರೆಗೆ ನಡೆಯಲಿದೆ.

ವಾರ್ಷಿಕ ಪರೀಕ್ಷೆ ಫಲಿತಾಂಶ ಪ್ರಕಟವಾದ ದಿನದಿಂದ ಮಾರ್ಚ್‌ 31ರೊಳಗೆ ಪರೀಕ್ಷಾ ಶುಲ್ಕ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.

ಶುಲ್ಕ ವಿವರ: ಒಂದು ವಿಷಯಕ್ಕೆ ₹ 101, ಎರಡು ವಿಷಯಕ್ಕೆ ₹ 201, ಮೂರು ಮತ್ತು ಅದಕ್ಕಿಂತ ಹೆಚ್ಚಿನ ವಿಷಯಗಳಿಗೆ ₹ 302 ಶುಲ್ಕ ನಿಗದಿಪಡಿಸಲಾಗಿದೆ.

ಪೂರಕ ಪರೀಕ್ಷೆಯ ಫಲಿತಾಂಶವನ್ನು ಮೇ 4ರಂದು ಪ್ರಕಟಿಸುವಂತೆ  ಜಿಲ್ಲಾ ಉಪ ನಿರ್ದೇಶಕರಿಗೆ ಸೂಚಿಸಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry