6

ವಿಶ್ವಬ್ಯಾಂಕ್‌ ದ್ವೈವಾರ್ಷಿಕ ವರದಿ : ಜಿಡಿಪಿ ಶೇ 7.3 ನಿರೀಕ್ಷೆ

Published:
Updated:
ವಿಶ್ವಬ್ಯಾಂಕ್‌ ದ್ವೈವಾರ್ಷಿಕ ವರದಿ : ಜಿಡಿಪಿ ಶೇ 7.3 ನಿರೀಕ್ಷೆ

ನವದೆಹಲಿ (ಪಿಟಿಐ): ಭಾರತದ ಆರ್ಥಿಕ ವೃದ್ಧಿ ದರವು (ಜಿಡಿಪಿ) 2018–19ನೇ ಹಣಕಾಸು ವರ್ಷದಲ್ಲಿ ಶೇ 7.3ರಷ್ಟು ಬೆಳವಣಿಗೆ ದಾಖಲಿಸಲಿದೆ ಎಂದು ವಿಶ್ವಬ್ಯಾಂಕ್‌ ಅಂದಾಜಿಸಿದೆ.

ಇದೇ ಮಾರ್ಚ್‌ಗೆ ಕೊನೆಗೊಳ್ಳುವ ಪ್ರಸಕ್ತ ವರ್ಷದಲ್ಲಿ ವೃದ್ಧಿ ದರ

ಶೇ 6.7ರಷ್ಟು ಇರಲಿದೆ. ಆದರೆ, 2019–20ರಲ್ಲಿ ಇದು ಶೇ 7.5ಕ್ಕೆ ಏರಿಕೆಯಾಗಲಿದೆ ಎಂದು ಬ್ಯಾಂಕ್‌ ಬಿಡುಗಡೆ ಮಾಡಿರುವ ದ್ವೈವಾರ್ಷಿಕ ವರದಿಯಲ್ಲಿ ತಿಳಿಸಲಾಗಿದೆ.

ಆರ್ಥಿಕ ಸುಧಾರಣಾ ಕ್ರಮಗಳನ್ನು ಮುಂದುವರೆಸಿಕೊಂಡು ಹೋಗಲು ಮತ್ತು ಅವುಗಳ ವ್ಯಾಪ್ತಿ ಹಿಗ್ಗಿಸಲು ಆರ್ಥಿಕ ವೃದ್ಧಿ ದರ ಶೇ 8ಕ್ಕಿಂತ ಹೆಚ್ಚಿಗೆ ಇರಬೇಕು.

ಗರಿಷ್ಠ ಮಟ್ಟದ ವೃದ್ಧಿ ದರದಿಂದ ಮಾತ್ರ ಭಾರತವು ಜಾಗತಿಕ ಆರ್ಥಿಕತೆ ಜತೆ ಹೆಜ್ಜೆ ಹಾಕಲು ನೆರವಾಗಲಿದೆ. ಸಾಲ ನೀಡಿಕೆ, ಬಂಡವಾಳ ಹೂಡಿಕೆ ಹೆಚ್ಚಿಸಲು ಮತ್ತು ರಫ್ತುಗಳ ಸ್ಪರ್ಧಾತ್ಮಕತೆ ಹೆಚ್ಚಿಸಲೂ ಇದರಿಂದ ಸಾಧ್ಯವಾಗಲಿದೆ. ದೇಶಿ ಆರ್ಥಿಕತೆಯು ನೋಟು ರದ್ದತಿ ಮತ್ತು ಜಿಎಸ್‌ಟಿ ಜಾರಿಯ ಅಡೆತಡೆಗಳನ್ನು ದಾಟಿ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಈ ಹಣಕಾಸು ವರ್ಷದ ಏಪ್ರಿಲ್‌– ಜೂನ್‌ ತ್ರೈಮಾಸಿಕದಲ್ಲಿ ವೃದ್ಧಿ ದರವು  ಮೂರು ವರ್ಷಗಳ ಹಿಂದಿನ ಮಟ್ಟಕ್ಕೆ (ಶೇ 5.7) ಕುಸಿತ ಕಂಡಿತ್ತು. ನಂತರದ ತ್ರೈಮಾಸಿಕಗಳಲ್ಲಿ ಚೇತರಿಕೆ ಕಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry