ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರನ್‌ ಸಹೋದರರು ಆರೋಪಮುಕ್ತ: ಸಿಬಿಐ ಕೋರ್ಟ್‌

Last Updated 14 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಚೆನ್ನೈ: ಅಕ್ರಮವಾಗಿ ದೂರವಾಣಿ ಸಂಪರ್ಕ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರದ ದೂರ ಸಂಪರ್ಕ ಇಲಾಖೆಯ ಮಾಜಿ ಸಚಿವ ದಯಾನಿಧಿ ಮಾರನ್‌ ಹಾಗೂ ಅವರ ಸಹೋದರ ಕಲಾನಿಧಿ ಮಾರನ್‌ ಅವರನ್ನು ಸಿಬಿಐ ವಿಶೇಷ ಕೋರ್ಟ್‌ ಬುಧವಾರ ಆರೋಪ ಮುಕ್ತಗೊಳಿಸಿದೆ.

ಇವರ ವಿರುದ್ಧ ಇರುವ ಯಾವುದೇ ಆರೋಪಗಳು ಮೇಲ್ನೋಟಕ್ಕೆ ಸಾಬೀತಾಗಿಲ್ಲ ಎಂದು ನ್ಯಾಯಾಧೀಶ ಎಸ್‌.ನಟರಾಜನ್‌ ಹೇಳಿದ್ದಾರೆ.

2004–06ನೇ ಸಾಲಿನಲ್ಲಿ ದಯಾನಿಧಿ ಅವರು ಸಚಿವರಾಗಿದ್ದ ವೇಳೆ ಅವರಿಗೆ ಒದಗಿಸಲಾಗಿದ್ದ 764 ದೂರವಾಣಿ ಸಂಪರ್ಕಗಳಿಗೆ ಶುಲ್ಕ ಪಾವತಿಸಿರಲಿಲ್ಲ. ಇದರಿಂದ ಬಿಎಸ್‌
ಎನ್‌ಎಲ್ ಮತ್ತು ಎಂಟಿಎನ್‌ಎಲ್‌ಗೆ ₹1.78 ಕೋಟಿ ನಷ್ಟವಾಗಿತ್ತು. ಜೊತೆಗೆ, ಕಲಾನಿಧಿ ಒಡೆತನದ ಸನ್‌ ಟಿ.ವಿಯ ಕಾರ್ಯಕ್ರಮಗಳ ವೇಗವಾದ ಸಂವಹನಕ್ಕಾಗಿ ಅಕ್ರಮವಾಗಿ ದೂರವಾಣಿ ತಂತಿಗಳನ್ನು ಬಳಸಿಕೊಳ್ಳಲಾಗಿದ್ದು, ಮಾರನ್ ಅವರ ಮನೆ ಟೆಲಿಫೋನ್ ಎಕ್ಸ್‌ಚೇಂಜ್‌ ಆಗಿ ಪರಿವರ್ತನೆ ಹೊಂದಿದೆ’ ಎಂದು ಸಿಬಿಐ ಆರೋಪಿಸಿತ್ತು.

ಈ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದ ಮಾರನ್‌ ಸಹೋದರರು ಕೋರ್ಟ್‌ ಮೆಟ್ಟಿಲೇರಿದ್ದರು. ತಮ್ಮ ಕಕ್ಷಿದಾರರು ನಿಯತ್ತಿನವರಾಗಿದ್ದು ಯಾವುದೇ ನಷ್ಟ ಉಂಟು ಮಾಡಿಲ್ಲ ಎಂದು ಅವರ ಪರ ವಕೀಲರು ವಾದಿಸಿದ್ದರು. ಅದನ್ನು ಕೋರ್ಟ್‌ ಮಾನ್ಯ ಮಾಡಿದೆ.

ಹೈಕೋರ್ಟ್‌ಗೆ ಮೇಲ್ಮನವಿ: ಮಾರನ್‌ ಸಹೋದರರನ್ನು ಆರೋಪಮುಕ್ತಗೊಳಿಸಿರುವ ಆದೇಶವನ್ನು ಪ್ರಶ್ನಿಸಿ ಸಿಬಿಐ ಹೈಕೋರ್ಟ್‌ ಮೆಟ್ಟಿಲೇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT