‘ಡ್ರೋನ್‌ಗೂ ಮೇಕ್‌ ಇನ್ ಇಂಡಿಯಾ’

7

‘ಡ್ರೋನ್‌ಗೂ ಮೇಕ್‌ ಇನ್ ಇಂಡಿಯಾ’

Published:
Updated:
‘ಡ್ರೋನ್‌ಗೂ ಮೇಕ್‌ ಇನ್ ಇಂಡಿಯಾ’

ನವದೆಹಲಿ: ವಿಮಾನ ಹಾಗೂ ಡ್ರೋನ್‌ಗಳಿಗೂ ‘ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮವನ್ನು ವಿಸ್ತರಿಸಲಾಗುವುದು ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಸುರೇಶ್ ಪ್ರಭು ಬುಧವಾರ ತಿಳಿಸಿದರು.

ಮುಂದಿನ ಕೆಲ ವರ್ಷಗಳಲ್ಲಿ ದೇಶಕ್ಕೆ 1,300 ವಿಮಾನಗಳ ಅಗತ್ಯವಿದೆ. ಈ ನಿಟ್ಟಿನಲ್ಲಿ ವಿಮಾನಯಾನ ಸಚಿವಾಲಯ ಹಾಗೂ ರಕ್ಷಣಾ ಸಚಿವಾಲಯಗಳು ಸೇರಿ ಅಗತ್ಯಗಳನ್ನು ಚರ್ಚಿಸಲಿವೆ ಎಂದಿದ್ದಾರೆ.

‘ಡ್ರೋನ್‌ಗಳಿಗೆ ಎರಡನೇ ಆದ್ಯತೆ. ಡ್ರೋನ್‌ಗಳಿಗೆ ದೇಶದಲ್ಲಿ ದೊಡ್ಡ ಮಾರುಕಟ್ಟೆಯಿದೆ. ಹೀಗಾಗಿ ಅವುಗಳ ತಯಾರಿ ನಿಟ್ಟಿನಲ್ಲಿ ನಾವು ಕೆಲಸ ಮಾಡಲಿದ್ದೇವೆ’ ಎಂದರು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry