89ಸಾವಿರ ಹುದ್ದೆಗಳಿಗೆ ‌ಒಂದೂವರೆ ಕೋಟಿ ಅಭ್ಯರ್ಥಿಗಳಿಂದ ಅರ್ಜಿ

4

89ಸಾವಿರ ಹುದ್ದೆಗಳಿಗೆ ‌ಒಂದೂವರೆ ಕೋಟಿ ಅಭ್ಯರ್ಥಿಗಳಿಂದ ಅರ್ಜಿ

Published:
Updated:

ನವದೆಹಲಿ: ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ 89,409 ಹುದ್ದೆಗಳಿಗೆ ‌ಒಂದೂವರೆ ಕೋಟಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.

‘ಸಿ ಮತ್ತು ಡಿ ವೃಂದದ ಹುದ್ದೆಗಳಿಗೆ ಅರ್ಜಿ ಕರೆಯಲಾಗಿತ್ತು. ಅರ್ಜಿ ಸಲ್ಲಿಸಲು ಮಾರ್ಚ್‌ 31 ಕೊನೆಯ ದಿನವಾಗಿದ್ದು, ಇನ್ನೂ ಹಲವು ದಿನ ಬಾಕಿ ಇರುವಾಗಲೇ ಆನ್‌ಲೈನ್‌ ಮೂಲಕ ಪ್ರಾಥಮಿಕ ನೋಂದಣಿ ಮಾಡಿಕೊಂಡಿರುವ ಅಭ್ಯರ್ಥಿಗಳ ಸಂಖ್ಯೆ ಒಂದೂವರೆ ಕೋಟಿ ದಾಟಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಪ್ರಾಥಮಿಕ ನೋಂದಣಿಯಲ್ಲಿ ಹೆಸರು ಮತ್ತು ವಿಳಾಸ ಭರ್ತಿ ಮಾಡಬೇಕಿದ್ದು, ಎರಡನೆಯ ಹಂತದಲ್ಲಿ ಇವರು ಪರೀಕ್ಷಾ ಶುಲ್ಕವನ್ನು ತುಂಬಬೇಕಿದೆ’ ಎಂದು ಅವರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

‘ಏಪ್ರಿಲ್‌ ಅಥವಾ ಮೇ ತಿಂಗಳಿನಲ್ಲಿ ಪರೀಕ್ಷೆ ನಡೆಯಲಿದೆ. ಅಭ್ಯರ್ಥಿಗಳ ಅರ್ಹತೆಗೆ ಸಂಬಂಧಿಸಿದಂತೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಹಲವಾರು ಬಾರಿ ಬದಲಾವಣೆ ಮಾಡಲಾಗಿದೆ’ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry