673 ನ್ಯಾಯಮೂರ್ತಿ ಪೈಕಿ ಮಹಿಳೆಯರ ಸಂಖ್ಯೆ ಕೇವಲ 73

7

673 ನ್ಯಾಯಮೂರ್ತಿ ಪೈಕಿ ಮಹಿಳೆಯರ ಸಂಖ್ಯೆ ಕೇವಲ 73

Published:
Updated:

ನವದೆಹಲಿ: ದೇಶದ ಹೈಕೋರ್ಟ್‌ಗಳಲ್ಲಿರುವ 673 ನ್ಯಾಯಮೂರ್ತಿಗಳ ಪೈಕಿ ಕೇವಲ 73 ಮಹಿಳಾ ನ್ಯಾಯಮೂರ್ತಿಗಳಿದ್ದಾರೆ. ಸುಪ್ರೀಂಕೋರ್ಟ್‌ನಲ್ಲಿ ಒಬ್ಬ ಮಹಿಳಾ ನ್ಯಾಯಮೂರ್ತಿ ಇದ್ದಾರೆ. ಕೇಂದ್ರ ಕಾನೂನು ಖಾತೆ ರಾಜ್ಯ ಸಚಿವ ಪಿ.ಪಿ. ಚೌಧರಿ ಅವರು ಲೋಕಸಭೆಗೆ ಬುಧವಾರ ಈ ಮಾಹಿತಿ ನೀಡಿದರು.

ದೇಶದ 24 ಹೈಕೋರ್ಟ್‌ಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಶೇ 10.85ರಷ್ಟಿದೆ ಎಂದು ಇತ್ತೀಚಿನ ಅಂಕಿ–ಅಂಶಗಳನ್ನು ಉಲ್ಲೇಖಿಸಿ ಅವರು ಮಾಹಿತಿ ನೀಡಿದರು.

ಬಾಂಬೆ ಹಾಗೂ ಮದ್ರಾಸ್ ಹೈಕೋರ್ಟ್‌ಗಳಲ್ಲಿ ತಲಾ 11, ದೆಹಲಿ ಹೈಕೋರ್ಟ್‌ನಲ್ಲಿ 10 ಮಹಿಳಾ ನ್ಯಾಯಮೂರ್ತಿಗಳಿದ್ದಾರೆ. ನ್ಯಾಯಾಂಗದ ಉನ್ನತ ಶ್ರೇಣಿಯಲ್ಲಿ ಜಾತಿ, ವರ್ಗ ಅಥವಾ ವ್ಯಕ್ತಿಗಳಿಗೆ ಮೀಸಲಾತಿ ನೀಡುವ ಯಾವುದೇ ವ್ಯವಸ್ಥೆ ಸಂವಿಧಾನದಲ್ಲಿ ಇಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry