ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಣಕಾಸು ಮಸೂದೆ–2018’ ಕ್ಕೆ ಅನುಮೋದನೆ

Last Updated 14 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ವಿರೋಧಪಕ್ಷಗಳ ಗಲಾಟೆ, ಪ್ರತಿಭಟನೆಯ ನಡುವೆಯೇ ಲೋಕಸಭೆಯಲ್ಲಿ ‘ಹಣಕಾಸು ಮಸೂದೆ–2018’  ಯಾವುದೇ ಚರ್ಚೆ ಇಲ್ಲದೆಯೇ ಬುಧವಾರ ಅನುಮೋದನೆ ಪಡೆದುಕೊಂಡಿತು.

ಏಪ್ರಿಲ್‌ 1ರಿಂದ ಆರಂಭವಾಗುವ ಮುಂದಿನ ಹಣಕಾಸು ವರ್ಷದ ₹89.25ಲಕ್ಷ ಕೋಟಿ ಖರ್ಚುವೆಚ್ಚಗಳ ‘ಧನವಿನಿಯೋಗ ಮಸೂದೆ’ ಬಗ್ಗೆಯೂ ಇದೇ ವೇಳೆ ಅನುಮೋದನೆ ದೊರೆಯಿತು. ಎಲ್ಲವೂ ಕೇವಲ 25 ನಿಮಿಷಗಳಲ್ಲಿ ಅಂತಿಮಗೊಂಡಿತು.

ಸದನದಲ್ಲಿ ಚರ್ಚೆ ನಡೆಸದೇ, ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಮಸೂದೆಗೆ ಅನುಮೋದನೆ ನೀಡಿದ ಕಾರಣ ವಿರೋಧ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದವು. ಗದ್ದಲದ ನಡುವೆಯೇ ಸಂಸತ್ತಿನ ಉಭಯ ಸದನಗಳ ಕಲಾಪ 8ನೇ ದಿನವೂ ಮುಂದಕ್ಕೆ ಹೋಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT