ಬಿಎಂಟಿಸಿ ನಿಲ್ದಾಣಗಳಲ್ಲಿ ಬೈಕ್‌, ಸೈಕಲ್‌ ಸೌಲಭ್ಯ

7

ಬಿಎಂಟಿಸಿ ನಿಲ್ದಾಣಗಳಲ್ಲಿ ಬೈಕ್‌, ಸೈಕಲ್‌ ಸೌಲಭ್ಯ

Published:
Updated:
ಬಿಎಂಟಿಸಿ ನಿಲ್ದಾಣಗಳಲ್ಲಿ ಬೈಕ್‌, ಸೈಕಲ್‌ ಸೌಲಭ್ಯ

ಬೆಂಗಳೂರು: ಬಿಎಂಟಿಸಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ‘ಲಾಸ್ಟ್ ಮೈಲ್ ಕನೆಕ್ಟಿವಿಟಿ’ ಒದಗಿಸಲು ಬೈಕ್‌ಗಳ ಬಾಡಿಗೆ ಸೌಲಭ್ಯ ಕಲ್ಪಿಸಿದೆ.

ಈ ಸೌಲಭ್ಯಕ್ಕೆ ಸಾರಿಗೆ ಸಚಿವ ಎಚ್‌.ಎಂ.ರೇವಣ್ಣ ಬುಧವಾರ ಚಾಲನೆ ನೀಡಿದರು. ‘ಮೆಟ್ರೊ ಬೈಕ್ಸ್‌’, ‘ರೆಂಟ್‌ ಆನ್‌ ದಿ ಗೋ’, ಯೂಲು, ‘ಪೆಡಲ್‌’ ಈ ನಾಲ್ಕು ಕಂಪನಿಗಳ ಸಹಭಾಗಿತ್ವದೊಂದಿಗೆ ಈ ಸೇವೆಯನ್ನು ಪ್ರಾರಂಭಿಸಿದೆ. ಪ್ರಾಯೋಗಿಕವಾಗಿ ಶಾಂತಿನಗರ ಬಸ್‌ ನಿಲ್ದಾಣದಲ್ಲಿ ಈ ಸೇವೆ ಲಭ್ಯವಿದೆ.

ಬೈಕ್‌ ಬಾಡಿಗೆ ಪಡೆಯುವುದು ಹೇಗೆ?:

ಶಾಂತಿನಗರ ಬಸ್‌ ನಿಲ್ದಾಣದಲ್ಲಿ ಬೈಕ್‌ಗಳು ಲಭ್ಯ. ಉಳಿದಂತೆ ಮನೆಯಿಂದ ಬರಲು ಬೈಕ್‌ ಸೇವೆ ಬೇಕಾದಲ್ಲಿ ಮೆಟ್ರೊ ಬೈಕ್ಸ್‌ ಡಾಟ್‌ ಇನ್‌ (metrobikes.in) ಆ್ಯಪ್‌ ಅಥವಾ ವೆಬ್‌ಸೈಟ್‌ ಮೂಲಕ ಪಡೆಯಬಹುದು. ಹೆಸರು ನೋಂದಾಯಿಸಿಕೊಂಡ ಗ್ರಾಹಕರ ವಾಹನ ಚಾಲನಾ ಪರವಾನಗಿ (ಡಿಎಲ್) ಹಾಗೂ ಆಧಾರ್ ಕಾರ್ಡ್‌ಗಳನ್ನು ಕಂಪನಿಯ ಸಿಬ್ಬಂದಿ ಪರಿಶೀಲಿಸಿ ಬೈಕ್‌ಗಳನ್ನು ನೀಡುತ್ತಾರೆ. ಬಳಸಿಕೊಂಡ ನಂತರ ಅದನ್ನು ನಿಲುಗಡೆ ಪ್ರದೇಶದಲ್ಲಿ ಬಿಟ್ಟರೆ ಆಯಿತು.

‘ಕೀ ಲೆಸ್‌ ಆ್ಯಕ್ಸೆಸ್‌’ ತಂತ್ರಾಂಶ ಹೊಂದಿರುವ ಬೈಕ್‌ಗಳನ್ನು ಪರಿಚಯಿಸಲು ಕಂಪನಿ ಯೋಚಿಸುತ್ತಿದೆ. ಶೀಘ್ರದಲ್ಲಿ ಅದು ಕಾರ್ಯಗತವಾಗಲಿದೆ. ಗ್ರಾಹಕರ ಮೊಬೈಲ್‌ಗೆ ಒಟಿಪಿ (ಒನ್ ಟೈಮ್ ಪಾಸ್‌ವರ್ಡ್‌) ರವಾನೆಯಾಗುತ್ತದೆ. ಅದನ್ನು ಬೈಕ್‌ನಲ್ಲಿ ಅಳವಡಿಸಿರುವ ತಂತ್ರಾಂಶದಲ್ಲಿ ನಮೂದಿಸಿ ಬೈಕ್‌ ಪಡೆಯಬಹುದು. ಯಾವುದೇ ಭದ್ರತಾ ಠೇವಣಿ ಹಾಗೂ ದಾಖಲಾತಿಗಳನ್ನು ಒದಗಿಸುವ ಅವಶ್ಯಕತೆ ಇಲ್ಲ. ಸವಾರ ಹಾಗೂ ಹಿಂಬದಿ ಸವಾರರಿಬ್ಬರಿಗೂ ಹೆಲ್ಮೆಟ್ ನೀಡಲಾಗುತ್ತದೆ. ಎಲೆಕ್ಟ್ರಿಕ್ ಬೈಕ್ ಹಾಗೂ ಸೈಕಲ್‌ಗಳೂ ಬಾಡಿಗೆಗೆ ಸಿಗಲಿವೆ.

‘ಜನರು ರಾತ್ರಿ ವೇಳೆ ಬೈಕ್‌ಗಳನ್ನು ಮನೆಗೆ ತೆಗೆದುಕೊಂಡು ಹೋಗಲು ಅವಕಾಶ ಇದೆ. ಈ ಅವಧಿಯಲ್ಲಿ ಪ್ರತಿ ಕಿ.ಮೀ.ಗೆ ₹ 6.50 ವಿಧಿಸಲಾಗುತ್ತದೆ. ಪ್ರತ್ಯೇಕ ಬಾಡಿಗೆ ಇರುವುದಿಲ್ಲ. ಮರುದಿನ ಬೆಳಿಗ್ಗೆ ಬೈಕ್‌ಗಳನ್ನು ಹಿಂದಿರುಗಿಸಬಹುದು’ ಎಂದು ಮೆಟ್ರೊ ಬೈಕ್‌ ಸಂಸ್ಥಾಪಕ ವಿವೇಕಾನಂದ ತಿಳಿಸಿದರು.

**

ಬಿಎಂಟಿಸಿಯ ಲಾಸ್ಟ್ ಮೈಲ್ ಕನೆಕ್ಟಿವಿಟಿ ಸೇವೆಯನ್ನು ಇನ್ನು ಮುಂದೆ ‘ಸಿದ್ಧ ಸೇವೆ’ ಹೆಸರಿನಿಂದ ಕರೆಯಲಾಗುವುದು

–ಎಚ್‌.ಎಂ. ರೇವಣ್ಣ, ಸಾರಿಗೆ ಸಚಿವ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry