ವಿನೇಶಾಗೆ ಒಜಿಕ್ಯು ಬೆಂಬಲ

ಮಂಗಳವಾರ, ಮಾರ್ಚ್ 26, 2019
33 °C

ವಿನೇಶಾಗೆ ಒಜಿಕ್ಯು ಬೆಂಬಲ

Published:
Updated:
ವಿನೇಶಾಗೆ ಒಜಿಕ್ಯು ಬೆಂಬಲ

ಮುಂಬೈ (ಪಿಟಿಐ): ಭಾರತದ ಭರವಸೆಯ ಕುಸ್ತಿಪಟು ವಿನೇಶಾ ಪೋಗಟ್‌ ಅವರಿಗೆ ಒಲಿಂಪಿಕ್ ಗೋಲ್ಡ್‌ ಕ್ವೆಸ್ಟ್‌ (ಒಜಿಕ್ಯು) ಬೆಂಬಲ ಸಿಕ್ಕಿದೆ.

23 ವರ್ಷದ ವಿನೇಶಾ ಅವರು 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಭರವಸೆ ಹೊಂದಿದ್ದಾರೆ. ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಇತ್ತೀಚೆಗೆ ಬೆಳ್ಳಿ ಗೆದ್ದುಕೊಂಡಿದ್ದರು. 2014ರ ಕಾಮನ್‌ವೆಲ್ತ್ ಕೂಟದಲ್ಲಿ ಚಾಂಪಿಯನ್ ಆಗಿದ್ದರು.

50ಕೆ.ಜಿ ಫ್ರೀಸ್ಟೈಲ್ ವಿಭಾಗದಲ್ಲಿ ಸ್ಪರ್ಧೆ ಒಡ್ಡುವ ವಿನೇಶಾ ಈ ಮೊದಲು ಜೆಎಸ್‌ಡಬ್ಲ್ಯು ಸ್ಪೋರ್ಟ್ಸ್ ಎಕ್ಸಲೆನ್ಸ್ ಸಹಾಯದಿಂದ ಅಭ್ಯಾಸ ನಡೆಸಿದ್ದರು.‌

‘ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದುಕೊಳ್ಳುವ ಉದ್ದೇಶದಿಂದ ಸಾಕಷ್ಟು ಕಠಿಣ ಶ್ರಮ ಹಾಕುತ್ತಿದ್ದೇನೆ. ನನ್ನ ಅಭ್ಯಾಸಕ್ಕೆ ಒಜಿಕ್ಯು ಸಹಾಯ ಸಿಕ್ಕಿರುವುದಕ್ಕೆ ಖುಷಿಯಾಗಿದೆ. ಈ ವರ್ಷ ಮಹತ್ವದ ಟೂರ್ನಿಗಳು ಆಯೋಜನೆಗೊಂಡಿವೆ. ಈ ಸಂದರ್ಭದಲ್ಲಿ ಸಿಗುವ ಬೆಂಬಲ ನಮ್ಮ ವೃತ್ತಿಬದುಕಿಗೆ ಮುಖ್ಯವಾದದ್ದು’ ಎಂದು ವಿನೇಶಾ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry