ಟೆನಿಸ್: ಕ್ವಾರ್ಟರ್‌ಗೆ ಹಲೆಪ್‌, ವೀನಸ್‌

ಭಾನುವಾರ, ಮಾರ್ಚ್ 24, 2019
31 °C
ಇಂಡಿಯಾನ ವೇಲ್ಸ್‌ ಮಾಸ್ಟರ್ಸ್‌ ಟೆನಿಸ್ ಟೂರ್ನಿ; ವೋಜ್ನಿಯಾಕಿಗೆ ಆಘಾತ

ಟೆನಿಸ್: ಕ್ವಾರ್ಟರ್‌ಗೆ ಹಲೆಪ್‌, ವೀನಸ್‌

Published:
Updated:
ಟೆನಿಸ್: ಕ್ವಾರ್ಟರ್‌ಗೆ ಹಲೆಪ್‌, ವೀನಸ್‌

ಇಂಡಿಯಾನ ವೇಲ್ಸ್‌, ಅಮೆರಿಕ (ಎಎಫ್‌ಪಿ): ವಿಶ್ವದ ಅಗ್ರ ರ‍್ಯಾಂಕಿಂಗ್‌ ಆಟಗಾರ್ತಿ ಸಿಮೊನಾ ಹಲೆಪ್‌ ಹಾಗೂ ವೀನಸ್ ವಿಲಿಯಮ್ಸ್‌ ಅವರು ಇಂಡಿಯಾನ ವೇಲ್ಸ್ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ಬುಧವಾರ ಎಂಟರ ಘಟ್ಟಕ್ಕೆ ಪ್ರವೇಶಿಸಿದ್ದಾರೆ.

ಮಹಿಳೆಯರ ಸಿಂಗಲ್ಸ್ ವಿಭಾಗದ ನಾಲ್ಕನೇ ಸುತ್ತಿನಲ್ಲಿ ಹಲೆಪ್‌ 7–5, 6–1ರಲ್ಲಿ ನೇರ ಸೆಟ್‌ಗಳಿಂದ ಚೀನಾದ ವಾಂಗ್ ಕ್ಸಿಯಾಂಗ್ ಅವರ ಸವಾಲನ್ನು ಮೀರಿ ನಿಂತರು.

ಅಮೆರಿಕದ ಆಟಗಾರ್ತಿ ವೀನಸ್‌ ವಿಲಿಯಮ್ಸ್‌ 7–6, 6–4ರಲ್ಲಿ ಅನಸ್ತಸಿಜಾ ಸೆವಾಸ್ತೊವಾ ಎದುರು ಗೆದ್ದರು.

ವೋಜ್ನಿಯಾಕಿಗೆ ಆಘಾತ: ಡೆನ್ಮಾರ್ಕ್‌ನ ಕ್ಯಾರೊಲಿನಾ ವೋಜ್ನಿಯಾಕಿ 4–6, 5–7ರಲ್ಲಿ ರಷ್ಯಾದ ಡರಿಯಾ ಕಸ್ಟಕಿನಾ ಎದುರು ಸೋತಿದ್ದಾರೆ.

ಫೆರರ್‌ಗೆ ಸೋಲು: ಪುರುಷರ ಸಿಂಗಲ್ಸ್ ವಿಭಾಗದ ಮೂರನೇ ಸುತ್ತಿನ ಪಂದ್ಯದಲ್ಲಿ ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ 6–4, 7–6ರಲ್ಲಿ ಸ್ಪೇನ್‌ನ ಡೇವಿಡ್‌ ಫೆರರ್ ಎದುರು ಗೆದ್ದರು.

ಸಿಲಿಕ್‌ಗೆ ಆಘಾತ: ಮರಿನ್ ಸಿಲಿಕ್‌ 4–6, 4–6ರಲ್ಲಿ ಜರ್ಮನಿಯ ಫಿಲಿಪ್‌ ಕೊಚಿಬರ್ ಎದುರು ಸೋತರು.

ಯೂಕಿಗೆ ನಿರಾಸೆ: ಭಾರತದ ಯೂಕಿ ಭಾಂಬ್ರಿ ಮೂರನೇ ಸುತ್ತಿನ ಪಂದ್ಯದಲ್ಲಿ ತಮ್ಮ ಜಯದ ಓಟವನ್ನು ಕೊನೆಗೊಳಿಸಿದ್ದಾರೆ. 7–6, 4–6, 4–6ರಲ್ಲಿ ವಿಶ್ವ ರ‍್ಯಾಂಕಿಂಗ್‌ನಲ್ಲಿ 21ನೇ ಸ್ಥಾನದಲ್ಲಿರುವ ಸ್ಯಾಮ್‌ ಕ್ವೆರಿ ಎದುರು ಯೂಕಿ ಸೋತರು.

ಯೂಕಿ ಭಾಂಬ್ರಿಗೆ ಇದು ಸ್ಮರಣೀಯ ಟೂರ್ನಿ ಎನಿಸಿದೆ. ಆರಂಭಿಕ ಸುತ್ತುಗಳಲ್ಲಿ ಅವರು ಎರಡು ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಗೆದ್ದಿರುವ ನಿಕೊಲಸ್ ಮಹತ್ ಹಾಗೂ 12ನೇ ರ‍್ಯಾಂಕ್‌ನ ಆಟಗಾರ ಲೂಕಸ್ ಪುಯಿಲ್ಲೆಗೆ ಸೋಲುಣಿಸುವ ಮೂಲಕ ಮೂರನೇ ಸುತ್ತು ತಲುಪಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry