ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರ್‌ ಇಂಡಿಯಾದ ಅಧಿಕೃತ ಟ್ವಿಟರ್ ಖಾತೆ ಹ್ಯಾಕ್

Last Updated 15 ಮಾರ್ಚ್ 2018, 4:49 IST
ಅಕ್ಷರ ಗಾತ್ರ

ನವದೆಹಲಿ: ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯ ಅಧಿಕೃತ ಟ್ವಿಟರ್ ಖಾತೆ ಹ್ಯಾಕ್ ಆಗಿದೆ.

ಗುರುವಾರ ಬೆಳಿಗ್ಗೆ ಸರಣಿ ಟ್ವೀಟ್‌ಗಳು ಪ್ರಕಟಗೊಂಡ ಬೆನ್ನಲ್ಲೇ ಟ್ವಿಟರ್ ಖಾತೆ ಸೈಬರ್ ದಾಳಿಗೆ ತುತ್ತಾಗಿರುವುದು ಗೊತ್ತಾಗಿದೆ. ಆ ಪೈಕಿ ಒಂದು ಟ್ವೀಟ್‌ನಲ್ಲಿ, ‘ಕೊನೆಯ ಕ್ಷಣದ ಘೋಷಣೆ: ನಮ್ಮ ಎಲ್ಲ ವಿಮಾನಗಳ ಹಾರಾಟ ರದ್ದುಪಡಿಸಲಾಗಿದೆ. ಇನ್ನು ನಾವು ಟರ್ಕಿಯ ವಿಮಾನಗಳಲ್ಲಿ ಪ್ರಯಾಣಿಸಲಿದ್ದೇವೆ’ ಎಂದು ಉಲ್ಲೇಖಿಸಲಾಗಿದೆ.

‘ಟರ್ಕಿ ಸೈಬರ್ ಆರ್ಮಿ’ ಎಂದು ಟ್ವಿಟರ್ ಖಾತೆಯಲ್ಲಿ ಪ್ರತಿಪಾದಿಸಿಕೊಂಡಿರುವ ‘ಆಯ್ಯಿಲ್‌ಡಿಜ್‌ಟ್’ ಎಂಬ ಗುಂಪು ಈ ಕೃತ್ಯ ಎಸಗಿರುವುದಾಗಿ ರಿಟ್ವೀಟ್ ಮೂಲಕ ತಿಳಿಸಿದೆ. ಜತೆಗೆ, ಟರ್ಕಿ ಪರ ಅನೇಕ ಟ್ವೀಟ್‌ಗಳನ್ನೂ ಪ್ರಕಟಿಸಿದೆ. ಆದರೆ, ಟ್ವಿಟರ್ ಖಾತೆ ಟ್ವಿಟರ್ ಖಾತೆ ಹ್ಯಾಕ್ ಆಗಿರುವ ಬಗ್ಗೆ ಏರ್‌ ಇಂಡಿಯಾ ಅಧಿಕಾರಿಗಳು ಇದುವರೆಗೆ ಅಧಿಕೃತವಾಗಿ ಮಾಹಿತಿ ಬಹಿರಂಗಪಡಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT