ಕರ್ನಾಟಕದಲ್ಲಿ ಉಪನ್ಯಾಸದ ಸಮಯ ಕಡಿಮೆ ಮಾಡಿ: ಯೋಗಿಗೆ ಸಿದ್ದರಾಮಯ್ಯ ಸಲಹೆ

ಬುಧವಾರ, ಮಾರ್ಚ್ 20, 2019
25 °C
ಉತ್ತರ ಪ್ರದೇಶ ಉಪ ಚುನಾವಣೆ ಫಲಿತಾಂಶಕ್ಕೆ ಪ್ರತಿಕ್ರಿಯೆ

ಕರ್ನಾಟಕದಲ್ಲಿ ಉಪನ್ಯಾಸದ ಸಮಯ ಕಡಿಮೆ ಮಾಡಿ: ಯೋಗಿಗೆ ಸಿದ್ದರಾಮಯ್ಯ ಸಲಹೆ

Published:
Updated:
ಕರ್ನಾಟಕದಲ್ಲಿ ಉಪನ್ಯಾಸದ ಸಮಯ ಕಡಿಮೆ ಮಾಡಿ: ಯೋಗಿಗೆ ಸಿದ್ದರಾಮಯ್ಯ ಸಲಹೆ

ಬೆಂಗಳೂರು: ಅಭಿವೃದ್ಧಿ ಬಗ್ಗೆ ಕರ್ನಾಟಕದಲ್ಲಿ ಉಪನ್ಯಾಸ ನೀಡುವ ಸಮಯವನ್ನು ಕಡಿಮೆ ಮಾಡಬೇಕು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಉತ್ತರ ಪ್ರದೇಶ ಮತ್ತು ಬಿಹಾರದ ಮೂರು ಲೋಕಸಭಾ ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಸೋಲಿನ ಬಗ್ಗೆ ಪ್ರತಿಕ್ರಿಯಿಸಿ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದು, ಯೋಗಿ ಅವರನ್ನುದ್ದೇಶಿಸಿ ವ್ಯಂಗ್ಯವಾಡಿದ್ದಾರೆ. ಜತೆಗೆ, ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಸಮಾಜವಾದಿ(ಎಸ್‌ಪಿ) ಪಕ್ಷ ಮತ್ತು ಬಹುಜನ ಸಮಾಜ ಪಕ್ಷಗಳಿಗೆ (ಬಿಎಸ್‌ಪಿ) ಅಭಿನಂದನೆ ಸಲ್ಲಿಸಿದ್ದಾರೆ.

‘ಉತ್ತರ ಪ್ರದೇಶದ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಅವರು ಪ್ರತಿನಿಧಿಸಿದ್ದ ಲೋಕಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿಗೆ ಅವಮಾನಕರ ಸೋಲಾಗಿದೆ. ಐತಿಹಾಸಿಕ ಜಯ ಸಾಧಿಸಿರುವ ಎಸ್‌ಪಿ ಮತ್ತು ಬಿಎಸ್‌ಪಿಗೆ ಅಭಿನಂದನೆಗಳು. ಈ ಗೆಲುವಿನಲ್ಲಿ ಬಿಜೆಪಿಯೇತರ ಪಕ್ಷಗಳ ಒಗ್ಗಟ್ಟು ಪ್ರಮುಖ ಪಾತ್ರ ವಹಿಸಿದೆ. ಯೋಗಿ ಆದಿತ್ಯನಾಥ್ ಅವರು ಅಭಿವೃದ್ಧಿ ಬಗ್ಗೆ ಕರ್ನಾಟಕದಲ್ಲಿ ಉಪನ್ಯಾಸ ನೀಡುವ ಸಮಯವನ್ನು ಕಡಿಮೆ ಮಾಡಬೇಕು’ ಎಂದು ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ತವರು ಕ್ಷೇತ್ರ ಗೋರಖಪುರ ಮತ್ತು ಉಪ ಮುಖ್ಯಮಂತ್ರಿ ಕೇಶವ್‌ ಪ್ರಸಾದ್‌ ಮೌರ್ಯ ಅವರು ಪ್ರತಿನಿಧಿಸಿದ್ದ ಫೂಲ್‌ಪುರ ಲೋಕಸಭಾ ಕ್ಷೇತ್ರಗಳಲ್ಲಿಯೇ ಬಿಜೆಪಿ ಅಭ್ಯರ್ಥಿಗಳು ಸೋಲು ಕಂಡಿದ್ದಾರೆ.

ಇನ್ನಷ್ಟು ಸುದ್ದಿ...

ಬಿಜೆಪಿಗೆ ಮುಖಭಂಗ

ಬಿ.ಎಸ್.ಪಿ. ಆನೆಯನ್ನು ಪಳಗಿಸೀತೇ ಬಿಜೆಪಿ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry