ಯುವರಾಜ್‌ ದಾಖಲೆ ಹಿಂದಿಕ್ಕಿದ ರೋಹಿತ್‌ ಶರ್ಮಾ

ಮಂಗಳವಾರ, ಮಾರ್ಚ್ 26, 2019
31 °C

ಯುವರಾಜ್‌ ದಾಖಲೆ ಹಿಂದಿಕ್ಕಿದ ರೋಹಿತ್‌ ಶರ್ಮಾ

Published:
Updated:
ಯುವರಾಜ್‌ ದಾಖಲೆ ಹಿಂದಿಕ್ಕಿದ ರೋಹಿತ್‌ ಶರ್ಮಾ

ಕೊಲಂಬೊ: ಭಾರತ ಟಿ–20 ಕ್ರಿಕೆಟ್‌ ತಂಡದ ನಾಯಕ ರೋಹಿತ್‌ ಶರ್ಮಾ ಅವರು ಬಾಂಗ್ಲಾದೇಶದ ವಿರುದ್ಧ ನಡೆದ ಟಿ–20 ಪಂದ್ಯದಲ್ಲಿ 5 ಸಿಕ್ಸರ್‌ ಸಿಡಿಸುವ ಮೂಲಕ ಆಲೌರೌಂಡರ್‌ ಯುವರಾಜ್‌ ದಾಖಲೆಯನ್ನು ಹಿಂದಿಕ್ಕಿದ್ದಾರೆ.

ಯುವಿ ಬಾಂಗ್ಲಾ ವಿರುದ್ಧ 74 ಸಿಕ್ಸರ್‌ಗಳನ್ನು ಗಳಿಸಿದ ದಾಖಲೆಯನ್ನು ಹೊಂದಿದ್ದರು. ರೋಹಿತ್‌ ಇದೀಗ 75 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ.  

ಬುಧವಾರ ನಡೆದ ಪಂದ್ಯದಲ್ಲಿ ನಾಯಕ ರೋಹಿತ್‌ ಶರ್ಮಾ (89; 61ಎ, 5ಬೌಂ, 5ಸಿ) ಮತ್ತು ಸುರೇಶ್‌ ರೈನಾ (47; 30ಎ, 5ಬೌಂ, 2ಸಿ) ಅವರ ಅಬ್ಬರದ ಬ್ಯಾಟಿಂಗ್‌ ನೆರವಿನಿಂದ ಭಾರತ ತಂಡ ನಿದಾಸ್‌ ಕಪ್ ಟ್ವೆಂಟಿ–20 ಕ್ರಿಕೆಟ್‌ ಸರಣಿಯ ಪಂದ್ಯದಲ್ಲಿ 17ರನ್‌ಗಳಿಂದ ಬಾಂಗ್ಲಾದೇಶವನ್ನು ಸೋಲಿಸಿದೆ. ಇದರೊಂದಿಗೆ ಫೈನಲ್‌ಗೆ ಲಗ್ಗೆ ಇಟ್ಟಿದೆ.

ಟೂರ್ನಿಯ ಮೊದಲ ಮೂರು ಪಂದ್ಯಗಳಲ್ಲಿ ಬ್ಯಾಟಿಂಗ್‌ ವೈಪಲ್ಯ ಎದುರಿಸಿದ್ದು ರೋಹಿತ್‌, ಈ ಪಂದ್ಯದಲ್ಲಿ ಉತ್ತಮ ಆಟವಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry