ಕಾಂಗ್ರೆಸ್‌ ವಿರುದ್ಧ ನಿರಂತರ ಹೋರಾಟ: ವೀರಶೈವ ಮಠಾಧೀಶರಿಂದ ಎಚ್ಚರಿಕೆ

7
ಲಿಂಗಾಯತ ಸ್ವತಂತ್ರ ಧರ್ಮ: ವರದಿ ತಿರಸ್ಕರಿಸಲು ಸಿದ್ದರಾಮಯ್ಯಗೆ ಮನವಿ

ಕಾಂಗ್ರೆಸ್‌ ವಿರುದ್ಧ ನಿರಂತರ ಹೋರಾಟ: ವೀರಶೈವ ಮಠಾಧೀಶರಿಂದ ಎಚ್ಚರಿಕೆ

Published:
Updated:
ಕಾಂಗ್ರೆಸ್‌ ವಿರುದ್ಧ ನಿರಂತರ ಹೋರಾಟ: ವೀರಶೈವ ಮಠಾಧೀಶರಿಂದ ಎಚ್ಚರಿಕೆ

ಬೆಂಗಳೂರು: ಲಿಂಗಾಯತ ಸ್ವತಂತ್ರ ಧರ್ಮದ ಬಗ್ಗೆ ನ್ಯಾಯಮೂರ್ತಿ ನಾಗಮೋಹನದಾಸ್ ಸಮಿತಿ ಸಲ್ಲಿಸಿರುವ ವರದಿಯನ್ನು ತಿರಸ್ಕರಿಸುವಂತೆ ವೀರಶೈವ ಬಣದ ಮಠಾಧೀಶರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ. ಜತೆಗೆ, ಮನವಿಗೆ ಸ್ಪಂದಿಸದಿದ್ದರೆ ಕಾಂಗ್ರೆಸ್ ವಿರುದ್ಧ ನಿರಂತರ ಹೋರಾಟ ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕಾಶಿ ಪೀಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಉಜ್ಜಯನಿ ಪೀಠದ ಸಿದ್ಧಲಿಂಗ ಸ್ವಾಮಿಜಿ ನೇತೃತ್ವದಲ್ಲಿ 57 ಮಠಾಧೀಶರು ಗುರುವಾರ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

‘ಸಮಾಜ ಒಡೆಯುವ ನಿರ್ಧಾರ ಕೈಗೊಳ್ಳದಂತೆ ಮನವಿ ಮಾಡಲಾಗಿದೆ. ಸಮಾಜಕ್ಕೆ ಉಪಕಾರ ‌ಮಾಡಲೇಬೇಕೆಂದಿದ್ದರೆ ವೀರಶೈವ-ಲಿಂಗಾಯತ ಧರ್ಮ ಎಂದು ಘೋಷಣೆ ಮಾಡಲಿ’ ಎಂದು ಮಠಾಧೀಶರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry