ದೇಗುಲ ಮಠಕ್ಕೆ ನೂತನ ಉತ್ತರಾಧಿಕಾರಿ

7

ದೇಗುಲ ಮಠಕ್ಕೆ ನೂತನ ಉತ್ತರಾಧಿಕಾರಿ

Published:
Updated:

ಕನಕಪುರ: ಕನಕಪುರ ದೇಗುಲಮಠದ ನೂತನ ಉತ್ತರಾಧಿಕಾರಿಯಾಗಿ ಚಾಮರಾಜನಗರ ತಾಲ್ಲೂಕಿನ ಕುಲಗಾಣ ಗ್ರಾಮದ ಕೋಮಲಾಂಭ ಮತ್ತು ಗೌರಿಶಂಕರಸ್ವಾಮಿ ದಂಪತಿಯ ದ್ವಿತೀಯ ಪುತ್ರ ಕೆ.ಜಿ.ಶಶಿಕುಮಾರ್‌ ನೇಮಕಗೊಂಡಿದ್ದಾರೆ.

ಮೈಸೂರಿನ ಜೆ.ಎಸ್‌.ಎಸ್‌. ವಿದ್ಯಾಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಕೆ.ಜಿ.ಶಶಿಕುಮಾರ್‌ ಅವರನ್ನು ದೇಗುಲಮಠದ ಹಿರಿಯ ಶ್ರೀಗಳಾದ ಡಾ.ಮುಮ್ಮಡಿ ನಿರ್ವಾಣಸ್ವಾಮಿಗಳು ಜೆ.ಎಸ್‌.ಎಸ್‌. ಮಹಾಸಂಸ್ಥಾನದ ಪೀಠಾಧಿಕಾರಿ ಸುತ್ತೂರು ಶಿವರಾತ್ರಿ ದೇಶೀಕೇಂದ್ರ ಸ್ವಾಮಿಗಳ ನಿರ್ದೇಶನದಂತೆ ಉತ್ತರಾಧಿಕಾರಿಯಾಗಿ ನೇಮಿಸಿಕೊಳ್ಳುವ ತೀರ್ಮಾನ ಮಾಡಿದ್ದಾರೆ.

ಬುಧವಾರ ಬೆಳಿಗ್ಗೆ ಮೈಸೂರು ಜೆ.ಎಸ್‌.ಎಸ್‌. ವಿದ್ಯಾಸಂಸ್ಥೆಯಲ್ಲಿ ಉತ್ತರಾಧಿಕಾರಿ ಸ್ವೀಕಾರ ಸಮಾರಂಭವು ಜರುಗಿತು. ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮಿ, ಮರಳೇಗವಿ ಮಠದ ಡಾ.ಮುಮ್ಮಡಿ ಶಿವರುದ್ರಸ್ವಾಮಿ, ಮೈಸೂರು ಹೊಸಮಠದ ನಟರಾಜಸ್ವಾಮಿ,

ಬಿಲ್ವಪತ್ರಮಠದ ಶಿವಲಿಂಗಸ್ವಾಮಿ, ವಿಧಾನ ಪರಿಷತ್‌ ಸದಸ್ಯ ವಿ.ಸೋಮಣ್ಣ, ಹರುಗುರ ಚರಮೂರ್ತಿಗಳು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry