ಶ್ರೀಶೈಲ ಜಾತ್ರೆಗೆ ವಿಶೇಷ ಬಸ್ ಸೌಲಭ್ಯ

7

ಶ್ರೀಶೈಲ ಜಾತ್ರೆಗೆ ವಿಶೇಷ ಬಸ್ ಸೌಲಭ್ಯ

Published:
Updated:

ಬಾಗಲಕೋಟೆ: ಮಾರ್ಚ್ 18 ರಂದು ಜರುಗುವ ಶ್ರೀಶೈಲ ಮಲ್ಲಿಕಾರ್ಜುನ ಜಾತ್ರೆಗೆ ತೆರಳಲು ಭಕ್ತಾದಿಗಳಿಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ ವಿಶೇಷ ಬಸ್ ಸೌಲಭ್ಯ ಕಲ್ಪಿಸಲಾಗಿದೆ.

ಮಾರ್ಚ್ 16 ರಿಂದ 19 ರವರೆಗೆ ಜಿಲ್ಲೆಯ ಬಾಗಲಕೋಟೆ, ಜಮಖಂಡಿ, ಬಾದಾಮಿ, ಹುನಗುಂದ, ಇಳಕಲ್, ಮುಧೋಳ, ಬೀಳಗಿ ಹಾಗೂ ಗುಳೇದಗುಡ್ಡ ಘಟಕಗಳಿಂದ ಶ್ರೀಶೈಲಕ್ಕೆ ಹೋಗಿ ಬರುವ ಭಕ್ತಾದಿಗಳ ಅನುಕೂಲಕ್ಕಾಗಿ ವಿಶೇಷ ಹೆಚ್ಚುವರಿ ಬಸ್‌ ವ್ಯವಸ್ಥೆ ಮಾಡಲಾಗಿದೆ.

ಒಂದೇ ಗುಂಪಿನಲ್ಲಿ ಕನಿಷ್ಠ 50 ಜನ ಪ್ರಯಾಣಿಕರಿದ್ದಲ್ಲಿ ಶ್ರೀಶೈಲಕ್ಕೆ ಹೋಗುವ ಮತ್ತು ಮರಳಿ ಬರುವಾಗ ನೇರವಾಗಿ ಅವರ ಊರಿನಿಂದ ಕರೆದೊಯ್ದು ಅಲ್ಲಿಗೇ ಬಿಡಲಾಗುವುದು. ಪ್ರಯಾಣಿಕರು ಇಚ್ಛಿಸಿದಲ್ಲಿ ಮಹಾ ನಂದಿ, ಮಂತ್ರಾಲಯಕ್ಕೆ ಸಾರಿಗೆ ಸೌಲಭ್ಯ ಒದಗಿಸಲಾಗುವುದು. ಸಾರ್ವ ಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಾಹನ ಕಾಯ್ದಿರಿಸಲು ವಿಭಾಗೀಯ ಅಧಿಕಾರಿಗಳು (ಮೊಬೈಲ್‌ ಸಂಖ್ಯೆ: 7760991752), ಘಟಕ ವ್ಯವಸ್ಥಾಪಕರು ಬಾಗಲಕೋಟೆ (7760991775), ಜಮಖಂಡಿ (7760991778), ಬಾದಾಮಿ (7760991776), ಇಳಕಲ್ (7760991777), ಮುಧೋಳ (7760991779), ಬೀಳಗಿ (7760991780) ಹಾಗೂ ಗುಳೇದಗುಡ್ಡ (7760991781) ಸಂಪರ್ಕಿಸಬಹುದು.

ಪಿಯು ಪರೀಕ್ಷೆ : 682 ಮಂದಿ ಗೈರು

ಬಾಗಲಕೋಟೆ:
ಜಿಲ್ಲೆಯಲ್ಲಿ ಬುಧವಾರ ನಡೆದ ದ್ವಿತೀಯ ಪಿಯುಸಿ ಕನ್ನಡ ವಿಷಯ ಪರೀಕ್ಷೆಯಲ್ಲಿ ಒಟ್ಟು 18,497 ಪೈಕಿ 17,515 ವಿದ್ಯಾರ್ಥಿಗಳು ಹಾಜರಾ ಗಿದ್ದರು. ಪರೀಕ್ಷೆಯಲ್ಲಿ ಯಾವುದೇ ವಿದ್ಯಾರ್ಥಿಗಳು ಡಿಬಾರ್ ಆಗಿಲ್ಲ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನ

ಬಾಗಲಕೋಟೆ:
ತೋಟಗಾರಿಕೆ ಇಲಾಖೆ ವತಿಯಿಂದ ಜಿಲ್ಲೆಯ ರೈತರ ಮಕ್ಕಳಿಗೆ ಬೆಳಗಾವಿ ಜಿಲ್ಲೆಯ ಹಿಡಕಲ್ ಡ್ಯಾಂ ತರಬೇತಿ ಕೇಂದ್ರದಲ್ಲಿ ಮೇ 2 ರಿಂದ 28 ರವರೆಗೆ 10 ತಿಂಗಳ ತೋಟಗಾರಿಕೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ತರಬೇತಿಯಲ್ಲಿ ಪಾಲ್ಗೊಳ್ಳುವವರು ಕನಿಷ್ಠ ಎಸ್ಎಸ್.ಎಲ್.ಸಿ ಪಾಸಾಗಿರ ಬೇಕು. ಸಾಮಾನ್ಯ ಅಭ್ಯರ್ಥಿಗಳು-13, ಪರಿಶಿಷ್ಟ ಜಾತಿಯ ಇಬ್ಬರು ಸೇರಿ ಒಟ್ಟು 15 ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅರ್ಜಿ ನಮೂನೆಯನ್ನು ಜಿಲ್ಲೆಯ ತೋಟಗಾರಿಕೆ ಉಪನಿರ್ದೇಶಕರು ಅಥವಾ ಹಿರಿಯ ಸಹಾಯಕ ನಿರ್ದೇಶಕ ಕಚೇರಿಯಿಂದ ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08354-–235515ಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಏರ್‌ಮನ್‌ ಹುದ್ದೆ ನೇಮಕಾತಿಗೆ ರ‍್ಯಾಲಿ

ಬಾಗಲಕೋಟೆ:
ಚಿತ್ರದುರ್ಗದ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣದಲ್ಲಿ ಮಾರ್ಚ್ 18 ಮತ್ತು 19 ರಂದು ಭಾರ ತೀಯ ವಾಯುಪಡೆಯ ಏರ್‌ಮನ್‌ ಹುದ್ದೆಗಳಿಗೆ ನೇಮಕಾತಿ ರ‍್ಯಾಲಿ ನಡೆಯಲಿದೆ.

ಮಾರ್ಚ್ 18 ರಂದು ದೈಹಿಕ ಕ್ಷಮತೆ ಹಾಗೂ ಲಿಖಿತ ಪರೀಕ್ಷೆ ನಡೆಯಲಿದೆ. ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಮಾರ್ಚ್ 19 ರಂದು ಅಡಾಪ್ಟೆಬಲಿಟಿ ಟೆಸ್ಟ್ 1 ಮತ್ತು 2 ನಡೆಯಲಿದೆ. 1998 ಜನವರಿ 12 ರಿಂದ 2002ರ ಜನವರಿ 2ರ ನಡುವೆ ಜನಿಸಿದ ಕನಿಷ್ಠ 152.5 ಸೆಂ.ಮೀ ಎತ್ತರದ ರಾಜ್ಯದ ಅವಿವಾಹಿತ ಪುರುಷರು ರ್‍ಯಾಲಿಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಭಾರತೀಯ ವಾಯುಪಡೆ ವೆಬ್‌ಸೈಟ್ ಇಲ್ಲವೇ ಏರ್‌ಮನ್ ಸೆಲೆಕ್ಷನ್ ಸೆಂಟರ್, ನಂ.1, ಕಬ್ಬನ್ ರಸ್ತೆ ಬೆಂಗಳೂರು, ದೂರವಾಣಿ ಸಂಖ್ಯೆ: 080–-25592199 ಇವರನ್ನು ಸಂಪರ್ಕಿಸಬಹುದಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry