ಕಚೇರಿ ಸ್ಥಳಕ್ಕೆ ಈ ವರ್ಷವೂ ಬೇಡಿಕೆ

ಮಂಗಳವಾರ, ಮಾರ್ಚ್ 19, 2019
28 °C

ಕಚೇರಿ ಸ್ಥಳಕ್ಕೆ ಈ ವರ್ಷವೂ ಬೇಡಿಕೆ

Published:
Updated:
ಕಚೇರಿ ಸ್ಥಳಕ್ಕೆ ಈ ವರ್ಷವೂ ಬೇಡಿಕೆ

ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಅತ್ಯುತ್ತಮ ಗುಣಮಟ್ಟದ ಸೇವೆ ಲಭ್ಯತೆಯ ಪಟ್ಟಿಯಲ್ಲಿ ಬೆಂಗಳೂರಿಗೆ ಆರನೇ ಸ್ಥಾನ ಸಿಕ್ಕಿದೆ. ಸ್ಥಿರತೆಯಿಂದ ಕೂಡಿರುವ ಮಾಹಿತಿ ತಂತ್ರಜ್ಞಾನ ಉದ್ಯಮ ಹಾಗೂ ರಿಯಾಲ್ಟಿ ಕ್ಷೇತ್ರದ ಗಮನಾರ್ಹ ಬೆಳವಣಿಗೆಗಳು ಈ ವಲಯದಲ್ಲಿ ಬೇಡಿಕೆ ಮತ್ತು ಪೂರೈಕೆಯನ್ನು ಹೆಚ್ಚಿಸಿವೆ. ಆರ್ಥಿಕ ಹಾಗೂ ರಾಜಕೀಯ ಅನಿಶ್ಚಿತತೆಯಿಂದಾಗಿ ರಿಯಾಲ್ಟಿ ಕ್ಷೇತ್ರದಲ್ಲಿ ಸಮಸ್ಯೆಗಳು ಎಷ್ಟು ಎದುರಾಗಿವೆಯೋ, ಅಷ್ಟೇ ಪ್ರಮಾಣದ ಅವಕಾಶಗಳೂ ಸಿಕ್ಕಿವೆ.

ವಿಶ್ವದ ಪ್ರಮುಖ ಮಹಾನಗರಗಳಲ್ಲಿ ಸ್ಥಿರಾಸ್ತಿಗಳ ದರ ಸತತ ಏರಿಕೆ ಕಾಣುತ್ತಿದೆ. ಕಳೆದ ಒಂದು ದಶಕದಿಂದ ಸ್ಥಳೀಯ ಆಸ್ತಿ ಖರೀದಿಗೆ ಹೆಚ್ಚು ಗಮನ ಕೊಡುತ್ತಿದ್ದ ಮಧ್ಯಮ ವರ್ಗದ ಜನರು ಇದೀಗ ಜಾಗತಿಕ ವಿದ್ಯಮಾನಗಳಿಗೆ ಪ್ರತಿಕ್ರಿಯಿಸುವುದನ್ನು ರೂಢಿಸಿಕೊಳ್ಳುತ್ತಿದ್ದಾರೆ. ನಮ್ಮ ಬೆಂಗಳೂರಿನಲ್ಲಿಯೂ ವಸತಿ ಸಮುಚ್ಛಯಗಳ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಉದ್ಯಮಗಳನ್ನು ಎಲ್ಲಿ ಸ್ಥಾಪಿಸಬೇಕು ಎಂದು ಯೋಚಿಸುವ ಉದ್ಯಮಿಗಳು, ಉತ್ಸಾಹಿ ಯುವ ಸಮುದಾಯ ಕೆಲಸ ಮಾಡಲು ಹಾಗೂ ವಾಸಿಸಲು ಯಾವ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳುತ್ತದೆ ಎನ್ನುವುದನ್ನು ಆಸಕ್ತಿಯಿಂದ ಗಮನಿಸುತ್ತಾರೆ. ಇಂಥ ನಗರಗಳ ಜಾಗತಿಕಪಟ್ಟಿಯಲ್ಲಿ ಬೆಂಗಳೂರಿನ ಹೆಸರೂ ಇರುತ್ತದೆ. ಭಾರತದ ಉದಯೋನ್ಮುಖ ತಂತ್ರಜ್ಞಾನ ನಗರಿಯಾಗಿ ಬೆಂಗಳೂರು ಹೆಸರುವಾಸಿಯಾಗಿದೆ. ಭಾರತದ ಐದನೇ ಎರಡರಷ್ಟು ಸಾಫ್ಟ್‌ವೇರ್ ರಫ್ತು ಬೆಂಗಳೂರಿನಿಂದಲೇ ಆಗುತ್ತದೆ.

ಉತ್ತರ ಬೆಂಗಳೂರು ಪ್ರವರ್ಧಮಾನ: ಕಚೇರಿ ಬಳಕೆಗಾಗಿ ಕಟ್ಟಡ, ನಿವೇಶನಗಳನ್ನು ಭೋಗ್ಯ (ಲೀಸ್) ಪಡೆಯುವ ಟ್ರೆಂಡ್ ಕಳೆದ ವರ್ಷ ಕಂಡು ಬಂದಿತ್ತು. ಉದ್ಯಮ ವಲಯದ ಅಂದಾಜಿನ ಪ್ರಕಾರ 2017ರಲ್ಲಿ 120 ಲಕ್ಷ ಚದರ ಅಡಿ ಜಾಗ ಈ ಉದ್ದೇಶಕ್ಕೆ ಬಳಕೆಯಾಗಿದೆ. ವಾಹನ ದಟ್ಟಣೆ ಸಮಸ್ಯೆಯ ಹೊರತಾಗಿಯೂ, ಬಹುತೇಕರು ಹೊರ ವರ್ತುಲ ರಸ್ತೆಯಲ್ಲಿ ಕಚೇರಿ ತೆರೆಯಲು ಬಯಸುತ್ತಿದ್ದಾರೆ. 2018ರಲ್ಲಿ  ಉತ್ತರ ಬೆಂಗಳೂರು (ಹೆಬ್ಬಾಳದಿಂದ ಯಲಹಂಕ) ಬೇಡಿಕೆಯ ಪ್ರದೇಶವಾಗುತ್ತದೆ ಎಂದು ರಿಯಾಲ್ಟಿ ವಲಯ ಅಂದಾಜಿಸಿದೆ.

ಬೆಲೆ ಹೆಚ್ಚುವ ಸಾಧ್ಯತೆ: ಕಚೇರಿ ಸ್ಥಳಾವಕಾಶದ ಬೇಡಿಕೆಯು ಪ್ರಸಕ್ತ ಸಾಲಿನಲ್ಲಿಯೂ ಮುಂದುವರಿಯುವ ನಿರೀಕ್ಷೆ ಇದೆ. ಆದರೆ ಲಭ್ಯ ಸಂಪನ್ಮೂಲಗಳು ಈ ಬೇಡಿಕೆ ಪೂರೈಸುವಷ್ಟು ಬೆಳೆದಿಲ್ಲ ಎನ್ನುವುದು ವಾಸ್ತವ. ರಿಯಾಲ್ಟಿ ಉದ್ಯಮಿಗಳು ಪ್ರಮುಖ ಮೈಕ್ರೊ ಮಾರ್ಕೆಟ್ ಎಂದು ಪರಿಗಣಿಸಿರುವ ಹೊರ ವರ್ತುಲ ರಸ್ತೆಯಲ್ಲಿ ಮೊದಲಾದೆಡೆ ಕಚೇರಿ ಸ್ಥಳಕ್ಕೆ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ. ಆದರೆ, ಪೂರೈಕೆ ಸಾಲುತ್ತಿಲ್ಲ. ಹೀಗಾಗಿ ಈ ವರ್ಷ ವಾಣಿಜ್ಯ ಬೇಡಿಕೆಯ ಕಟ್ಟಡಗಳು ಮತ್ತು ಕಚೇರಿ ಸ್ಥಳದ ದರ ಹೆಚ್ಚಾಗುವ ಸಾಧ್ಯತೆ ನಿಚ್ಚಳವಾಗಿದೆ.

ರಿಯಾಲ್ಟಿ ವಲಯ ಕುತೂಹಲದಿಂದ ನಿರೀಕ್ಷಿಸುತ್ತಿರುವ ಕೆಲ ಅಚ್ಚರಿದಾಯಕ ಹಾಗೂ ಗಮನಾರ್ಹ ವಿದ್ಯಮಾನಗಳು ಈ ವರ್ಷ ಘಟಿಸಲಿವೆ. ಬೃಹತ್ ಪ್ರಮಾಣದ ಕೈಗಾರಿಕಾ ಪಾರ್ಕ್‌ಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ, ತಂತ್ರಜ್ಞಾನ ಕಂಪೆನಿಗಳು ಭೋಗ್ಯಕ್ಕೆ ಕಚೇರಿ ಸ್ಥಳ ಪಡೆಯುವ ಚಟುವಟಿಕೆ ಹೆಚ್ಚಳ, ರೇರಾ, ಜಿಎಸ್‍ಟಿ ಹಾಗೂ ನೋಟು ರದ್ದತಿ ನಂತರದ ಬೆಳವಣಿಗೆಗಳಿಗೆ ಸಾಕ್ಷಿಯಾಗಲಿದೆ. ರಿಯಲ್ ಎಸ್ಟೇಟ್ ಎಂಬುದು ಎಂದಿಗೂ ಉತ್ತೇಜಕ ಹಾಗೂ ಆಸಕ್ತಿದಾಯಕ ಕ್ಷೇತ್ರ. ಈ ವರ್ಷವೂ ಇದಕ್ಕೆ ಯಾವುದೇ ಅಪವಾದಗಳು ಇರುವುದಿಲ್ಲ.

ಭವಿನ್ ಥಕ್ಕರ್

(ಲೇಖಕರು ಸಾವಿಲ್ಸ್ ಇಂಡಿಯಾದ ಮ್ಯಾನೇಜರ್)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry