ಪರಿಸರ, ವನ್ಯಜೀವಿ ಸಿನಿಮೋತ್ಸವ

7

ಪರಿಸರ, ವನ್ಯಜೀವಿ ಸಿನಿಮೋತ್ಸವ

Published:
Updated:
ಪರಿಸರ, ವನ್ಯಜೀವಿ ಸಿನಿಮೋತ್ಸವ

ಪರಿಸರ ಹಾಗೂ ವನ್ಯಜೀವಿಗಳ ಕುರಿತ ವಿಶಿಷ್ಟ ಚಲನಚಿತ್ರೋತ್ಸವ ‘ಸಿಎಂಎಸ್‌ ವಾತಾವರಣ್‌ ಪ್ರವಾಸ ಉತ್ಸವ’ ನಗರದ ಸುಚಿತ್ರಾ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿಯಲ್ಲಿ ಮಾರ್ಚ್‌ 16ರಿಂದ 18ರವರೆಗೆ ನಡೆಯಲಿದೆ.

ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕ್ಕಿ ಕೇಜ್‌ ಆಯೋಜಿಸುತ್ತಿರುವ ಈ ಉತ್ಸವದಲ್ಲಿ ಪರಿಸರ ಹಾಗೂ ವನ್ಯಜೀವಿ ಕುರಿತ ಚಿತ್ರಗಳ ಪ್ರದರ್ಶನ, ಕಾರ್ಯಾಗಾರಗಳು, ಚರ್ಚೆಗಳೂ ನಡೆಯಲಿವೆ. ವನ್ಯಜೀವಿ ಸಂರಕ್ಷಕರು, ಮಾಧ್ಯಮ ವೃತ್ತಿಪರರು, ಸಾರ್ವಜನಿಕ ಅಧಿಕಾರಿಗಳು, ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು ಭಾಗವಹಿಸಲಿದ್ದಾರೆ.

ಮಾರ್ಚ್‌ 16ರಂದು ಸಂಜೆ 6ಕ್ಕೆ ‘ಸುಸ್ಥಿರ ಜೀವನ: ಮರುಬಳಕೆ, ಮರು ಆವರ್ತನ ಮತ್ತು ನವೀಕರಣ’ದ ಬಗ್ಗೆ ಚರ್ಚೆ. ಮಳೆನೀರು ಕ್ಲಬ್‌ ಸಂಸ್ಥಾಪಕ ಎಸ್‌. ವಿಶ್ವನಾಥ್‌ ಮತ್ತು ಸಾಹಸ್‌ ಜೀರೋ ವೇಸ್ಟ್‌ ಸ್ಥಾಪಕ ವಿಲ್ಮ ರೊಡ್ರಿಗಸ್‌, ಇಕೋಫೋರ್ಜ್‌ ಸಲಹೆಗಾರರಾದ ಸಾಗರ್‌ ಗುಬ್ಬಿ ಭಾಗವಹಿಸಲಿದ್ದಾರೆ. ಮಾರ್ಚ್‌ 17ರಂದು ನಿರಂಜನ್ ಖತ್ರಿ ಅವರಿಂದ ‘ಸಂಪನ್ಮೂಲ ಜವಾಬ್ದಾರಿ ಹೊರುವಿಕೆ – ತ್ಯಾಜ್ಯ ಮತ್ತು ನೀರು’ ಕುರಿತು ಉಪನ್ಯಾಸ. ಸಂಜೆ ‘ಶ್ರೀ ಎಸ್. ಮಣಿಕಂದನ್ ನೆನಪು – ಕಾಡಿಗಾಗಿ ಬದುಕಿದ ಮತ್ತು ಕಾಡಿನಲ್ಲೇ ಮರಣಿಸಿದ ಕರ್ನಾಟಕದ ಅರಣ್ಯಾಧಿಕಾರಿ’ ಕುರಿತು ವಿನಯ್ ಕುಮಾರ್‌ ಅವರಿಂದ ಕಾರ್ಯಕ್ರಮ ನಡೆಯಲಿದೆ. ಮಾರ್ಚ್‌ 18ರಂದು ‘ಪರಿಸರ ಪ್ರಜ್ಞೆಗಾಗಿ ಸಂಗೀತ ಮತ್ತು ಚಲನಚಿತ್ರಗಳು’ ಕುರಿತು ರಿಕ್ಕಿ ಕೇಜ್‍ರೊಂದಿಗೆ ಸಂವಾದ ನಡೆಯಲಿದೆ.

ಉತ್ಸವದಲ್ಲಿ 36 ರಾಷ್ಟ್ರೀಯ ಮತ್ತು 25 ಅಂತಾರಾಷ್ಟ್ರೀಯ ನಾಮನಿರ್ದೇಶಿತ ಮತ್ತು ಪ್ರಶಸ್ತಿ ಪುರಸ್ಕೃತ ಚಿತ್ರಗಳನ್ನು ಎರಡು ಪರದೆಗಳಲ್ಲಿ ಏಕಕಾಲದಲ್ಲಿ ಪ್ರದರ್ಶಿಸಲಾಗುವುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry