ಜೈಲಿಗೆ ಹೋಗಿದ್ದು ನಿಜ, ಅದನ್ನೇ ಹೇಳಿರುವೆ: ಸಿಎಂ ಸಿದ್ದರಾಮಯ್ಯ

7

ಜೈಲಿಗೆ ಹೋಗಿದ್ದು ನಿಜ, ಅದನ್ನೇ ಹೇಳಿರುವೆ: ಸಿಎಂ ಸಿದ್ದರಾಮಯ್ಯ

Published:
Updated:
ಜೈಲಿಗೆ ಹೋಗಿದ್ದು ನಿಜ, ಅದನ್ನೇ ಹೇಳಿರುವೆ: ಸಿಎಂ ಸಿದ್ದರಾಮಯ್ಯ

ಚಿಕ್ಕಬಳ್ಳಾಪುರ: ‘ಯಡಿಯೂರಪ್ಪ ಅವರು ಜೈಲಿಗೆ ಹೋಗಿ ಬಂದಿರೋದು ನಿಜ. ಹೀಗಾಗಿ ನಾನು ಅದನ್ನೇ ಹೇಳಿರುವೆ. ಆದರೆ ಈ ವಿಚಾರವಾಗಿ ಹೈಕೋರ್ಟ್‌ ಜಾರಿಗೊಳಿಸಿದ ತುರ್ತು ನೋಟಿಸ್‌ನಲ್ಲಿ ಏನು ಹೇಳಿದ್ದಾರೆ ಎಂದು ಇನ್ನೂ ಗೊತ್ತಾಗಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಗೌರಿಬಿದನೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಯಡಿಯೂರಪ್ಪ ಅವರು ಜೈಲಿಗೆ ಹೋಗಿ ಬಂದಿದ್ದಾರೆ ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಕೋರ್ಟ್ ನೋಟಿಸ್ ಜಾರಿ ಮಾಡಿರುವ ವಿಚಾರ ಮಾಧ್ಯಮಗಳಿಂದ ತಿಳಿದು ಬಂದಿದೆ. ನಾನಿನ್ನು  ಆ ನೋಟಿಸ್ ನೋಡಿಲ್ಲ. ಯಡಿಯೂರಪ್ಪ ಅವರು ನನ್ನ ವಿರುದ್ಧ ಸಾರ್ವಜನಿಕ ವೇದಿಕೆಗಳಲ್ಲಿ ಕೀಳು ಭಾಷೆ, ಏಕವಚನದಲ್ಲಿ ಟೀಕಿಸುತ್ತಾರೆ. ಅದಕ್ಕೆ ಏನು ಹೇಳುವುದು? ಆದರೆ ನಾನು ಆ ಭಾಷೆಯಲ್ಲಿ ಮಾತನಾಡಿಲ್ಲ’ ಎಂದರು. 

ಇನ್ನಷ್ಟು: ಯಡಿಯೂರಪ್ಪ ವಿರುದ್ಧ ಅವಹೇಳನಕಾರಿ ಹೇಳಿಕೆ: ಸಿಎಂ ಸಿದ್ದರಾಮಯ್ಯ ಸೇರಿ ಇತರ ಕಾಂಗ್ರೆಸ್‌ ಮುಖಂಡರಿಗೆ ಹೈಕೋರ್ಟ್‌ ನೋಟಿಸ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry