ಪಿಎನ್‌ಬಿಗೆ ₹9 ಕೋಟಿ ವಂಚನೆ ಪ್ರಕರಣ ದಾಖಲಿಸಿದ ಸಿಬಿಐ

7
ನೀರವ್ ಮೋದಿ ಪ್ರಕರಣದ ಆರೋಪಿಗಳು ಭಾಗಿ

ಪಿಎನ್‌ಬಿಗೆ ₹9 ಕೋಟಿ ವಂಚನೆ ಪ್ರಕರಣ ದಾಖಲಿಸಿದ ಸಿಬಿಐ

Published:
Updated:

ನವದೆಹಲಿ : ವಜ್ರದ ವ್ಯಾಪಾರಿ ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸಿ ಅವರು ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ (ಪಿಎನ್‌ಬಿ) ₹13 ಸಾವಿರ ಕೋಟಿ ವಂಚಿಸಿರುವ ಪ್ರಕರಣದ ರೀತಿಯಲ್ಲಿಯೇ ಬ್ಯಾಂಕ್‌ನಲ್ಲಿ ಮತ್ತೊಂದು ವಂಚನೆ ನಡೆದಿರುವುದು ಪತ್ತೆಯಾಗಿದೆ.

ಚಾಂದ್ರಿ ಪೇಪರ್ಸ್ ಹಾಗೂ ಅಲೈಡ್ ಪ್ರಾಡಕ್ಟ್ಸ್, ಪಿಎನ್‌ಬಿಯ ಬ್ರ್ಯಾಡಿ ಹೌಸ್ ಶಾಖೆಯಲ್ಲಿಯೇ ₹ 9 ಕೋಟಿ ವಂಚನೆ ಎಸಗಿರುವ

ಕುರಿತು ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ.

ಈಗಾಗಲೇ ನೀರವ್ ಮೋದಿ–ಚೋಕ್ಸಿ ಪ್ರಕರಣದಲ್ಲಿ ಸಿಬಿಐ ತನಿಖೆ ಎದುರಿಸುತ್ತಿರುವ ಬ್ಯಾಂಕ್‌ನ ನಿವೃತ್ತ ಉದ್ಯೋಗಿ ಗೋಕುಲ್‌ನಾಥ್ ಶೆಟ್ಟಿ ಹಾಗೂ ಶಾಖೆಯ ವ್ಯವಸ್ಥಾಪಕ ಮನೋಜ್ ಕರಾತ್‌ ವಿರುದ್ಧ ಈಗ  ಇನ್ನೊಂದು ಎಫ್‌ಐಆರ್‌ ದಾಖಲಿಸಲಾಗಿದೆ.

ಮಾರ್ಚ್‌ 9ರಂದು ಎಫ್‌ಐಆರ್ ದಾಖಲಿಸಿದ ನಂತರ ವಿವಿಧ ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

ನಿರ್ದೇಶಕರ ಜತೆ ಭಾಗಿ: ಕಳೆದ ಮೇ 31ರಂದು ನಿವೃತ್ತರಾದ ಶೆಟ್ಟಿ ಹಾಗೂ ಕರಾತ್‌ ಅವರು ಕಂಪನಿಯ ನಿರ್ದೇಶಕರಾದ ಆದಿತ್ಯ ರಾಸಿವಸಿಯಾ ಹಾಗೂ ಈಶ್ವರದಾಸ್ ಅಗರ್‌ವಾಲ್‌ ಅವರೊಂದಿಗೆ ಸೇರಿ ಈ ವಂಚನೆ ಎಸಗಿದ್ದಾರೆ.

ಬ್ಯಾಂಕ್‌ಗೆ ವಂಚನೆ ಮಾಡುವ ಉದ್ದೇಶದಿಂದ ಇವರು ₹9.09 ಕೋಟಿ ಮೊತ್ತದ ಎರಡು ನಕಲಿ ಸಾಲ ಮರುಪಾವತಿ ಖಾತರಿ ಪತ್ರ

ಗಳನ್ನು (ಎಲ್‌ಒಯು)  ಬೆಲ್ಜಿಯಂನಲ್ಲಿರುವ ಎಸ್‌ಬಿಐನ ಆ್ಯಂಟ್‌ವರ್ಪ್‌ ಶಾಖೆಗೆ ನೀಡಿದ್ದಾರೆ ಎಂದು ಸಿಬಿಐ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry