ಅತ್ಯಾಚಾರ: ತೇಜ್‌ಪಾಲ್‌ ವಿರುದ್ಧದ ವಿಚಾರಣೆ ಆರಂಭ

7

ಅತ್ಯಾಚಾರ: ತೇಜ್‌ಪಾಲ್‌ ವಿರುದ್ಧದ ವಿಚಾರಣೆ ಆರಂಭ

Published:
Updated:
ಅತ್ಯಾಚಾರ: ತೇಜ್‌ಪಾಲ್‌ ವಿರುದ್ಧದ ವಿಚಾರಣೆ ಆರಂಭ

ಪಣಜಿ : ಮಹಿಳಾ ಸಹೋದ್ಯೋಗಿ ಮೇಲೆ ಲೈಂಗಿಕ ಕಿರುಕುಳ ನೀಡಿ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ‘ತೆಹಲ್ಕಾ’ ಮಾಜಿ ಪ್ರಧಾನ ಸಂಪಾದಕ ತರುಣ್‌ ತೇಜ್‌ಪಾಲ್‌ ವಿರುದ್ಧ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಗೋವಾ ಕೋರ್ಟ್‌ ಗುರುವಾರದಿಂದ ಆರಂಭಿಸಿದೆ.

ಸೆಷನ್ಸ್‌ ಕೋರ್ಟ್‌ ನ್ಯಾಯಾಧೀಶರ ಕೊಠಡಿಯಲ್ಲಿ  ವಿಚಾರಣೆ ಶುರುವಾಗಿದ್ದು, ಸಂತ್ರಸ್ತೆಯ ಹೇಳಿಕೆಗಳನ್ನು ಪಡೆದುಕೊಳ್ಳಲಾಗಿದೆ ಎಂದು ವಿಚಾರಣೆ ವೇಳೆ ಹಾಜರು ಇದ್ದ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು. ಕೊಠಡಿಯಲ್ಲಿ ವಿಚಾರಣೆ ನಡೆದ ಕಾರಣ, ಮಾಧ್ಯಮಗಳಿಗೆ ಪ್ರವೇಶ ನಿರಾಕರಿಸಲಾಗಿತ್ತು.

2013ರ ನವೆಂಬರ್‌ 7 ಹಾಗೂ 8ರಂದು ಪಂಚತಾರಾ ಹೋಟೆಲ್‌ನ ಲಿಫ್ಟ್‌ನಲ್ಲಿ ತೇಜ್‌ಪಾಲ್‌ ಲೈಂಗಿಕ ಕಿರುಕುಳ ನೀಡಿದ್ದಾಗಿ ಅವರ ಸಹೋದ್ಯೋಗಿ ಪೊಲೀಸರಿಗೆ ದೂರು ಕೊಟ್ಟಿದ್ದರು. ನವೆಂಬರ್‌ 30ರಂದು ತೇಜ್‌ಪಾಲ್‌ ಅವರನ್ನು ಬಂಧಿಸಲಾಗಿತ್ತು.

ಅತ್ಯಾಚಾರ, ಲೈಂಗಿಕ ಕಿರುಕುಳ ಹಾಗೂ ಮಹಿಳೆಯ ಮಾನಭಂಗ ಪ್ರಕರಣಗಳಿಗೆ ಸಂಬಂಧಿಸಿದಂತೆ ತೇಜ್‌ಪಾಲ್‌ ವಿರುದ್ಧ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಅದಕ್ಕೆ ತಡೆ ನೀಡಲು ಗೋವಾ ಸೆಷನ್ಸ್‌ ಕೋರ್ಟ್‌ ಹಾಗೂ ಹೈಕೋರ್ಟ್‌ಗಳು ನಿರಾಕರಿಸಿದ್ದರಿಂದ ವಿಚಾರಣೆ ಆರಂಭಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry