ನೇಪಾಳದ ಜತೆ ಸಂಬಂಧ ವೃದ್ಧಿಗೆ ಬದ್ಧ

7
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭರವಸೆ

ನೇಪಾಳದ ಜತೆ ಸಂಬಂಧ ವೃದ್ಧಿಗೆ ಬದ್ಧ

Published:
Updated:
ನೇಪಾಳದ ಜತೆ ಸಂಬಂಧ ವೃದ್ಧಿಗೆ ಬದ್ಧ

ಕಠ್ಮಂಡು: ‘ನೇಪಾಳದ ನಾಯಕತ್ವದೊಂದಿಗೆ ಕೆಲಸ ಮಾಡಲು ಭಾರತ ಬದ್ಧವಾಗಿದೆ. ಎರಡೂ ದೇಶಗಳ ಜನರ ಅನುಕೂಲಕ್ಕಾಗಿ ಉಭಯದೇಶಗಳ ಸಂಬಂಧ ಬಲಪಡಿಸುತ್ತೇವೆ’ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ.

ನೇಪಾಳದ ಮೊದಲ ಮಹಿಳಾ ಅಧ್ಯಕ್ಷೆ ವಿದ್ಯಾದೇವಿ ಭಂಡಾರಿ ಅವರು ಎರಡನೇ ಬಾರಿ ಅಧ್ಯಕ್ಷರಾಗಿ ಚುನಾಯಿರಾಗಿರುವುದಕ್ಕೆ ಅಭಿನಂದಿಸಿದ ಕೋವಿಂದ್, ‘ದ್ವಿಪಕ್ಷೀಯ ಸಂಬಂಧಗಳನ್ನು ಉತ್ತಮಪಡಿಸಲು, ಭಾರತ ಮತ್ತು ನೇಪಾಳ ಜನರ ಶ್ರೇಯೋಭಿವೃದ್ಧಿಗಾಗಿ ವಿದ್ಯಾ ಅವರೊಂದಿಗೆ ಕೈಜೋಡಿಸುತ್ತೇವೆ’ ಎಂದು ಕೋವಿಂದ್ ಅವರು ಭಾರತ ರಾಯಭಾರಿ ಮೂಲಕ ವಿದ್ಯಾ ಅವರಿಗೆ ತಲುಪಿಸಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry