ವಿಮಾನ ಮಾದರಿ ಮೀನು ಪತ್ತೆ

ಮಂಗಳವಾರ, ಮಾರ್ಚ್ 26, 2019
33 °C

ವಿಮಾನ ಮಾದರಿ ಮೀನು ಪತ್ತೆ

Published:
Updated:
ವಿಮಾನ ಮಾದರಿ ಮೀನು ಪತ್ತೆ

ಮದ್ದೂರು: ಸಮೀಪದ ದೇಶಹಳ್ಳಿಯ ಮದ್ದೂರಮ್ಮ ಕೆರೆಯಲ್ಲಿ ಗುರುವಾರ ವಿಮಾನ ಮಾದರಿಯನ್ನು ಹೋಲುವ ಅಪರೂಪದ ಮೀನು ಮೀನುಗಾರರ ಬಲೆಗೆ ಸಿಲುಕಿದೆ.

ದೇಶಹಳ್ಳಿ ಗ್ರಾಮದ ಮೀನುಗಾರ ನಾಗರಾಜ ನಾಯಕ್ ಅವರು ಎಂದಿನಂತೆ ಮೀನು ಹಿಡಿಯಲು ಕೆರೆಯಲ್ಲಿ ಬಲೆ ಬೀಸಿದ್ದರು. 1 ಕೆ.ಜಿ ತೂಕದ ಏರೋಪ್ಲೇನ್‌ ಮಾದರಿಯ ಈ ಮೀನು ಪತ್ತೆಯಾಗಿದೆ.

ಕಂದು ಬಣ್ಣದ ಮೀನಿನ ಮೈ ಮೇಲೆ ಹಳದಿ ಬಣ್ಣದ ಗೆರೆಗಳಿವೆ. ಬಾಯಿ ತಿಮಿಂಗಲದ ಬಾಯಿಯಂತಿದ್ದು, ಮೇಲ್ಭಾಗದಲ್ಲಿ ನಾಲ್ಕು ಹಂತದ ಚೂಪಾದ ಮುಳ್ಳುಗಳಿವೆ.

‘ಈ ರೀತಿಯ ಮೀನು ನೋಡಿಲ್ಲ. ಇದು ಯಾವ ಜಾತಿಯದ್ದು ಎಂದು ತಿಳಿದಿಲ್ಲ. ಬಲೆಯಲ್ಲಿ ಸಿಲುಕಿ ನೀರಿನಿಂದ ಹೊರಗೆ ತಂದ ಮೇಲೂ ಬದುಕಿದ್ದು, ರೈತ ಶೈಲೇಂದ್ರ ಅವರ ತೋಟದ ಬಾವಿಯಲ್ಲಿ ಬಿಡಲಾಗಿದೆ’ ಎಂದು ಮೀನುಗಾರ ನಾಗರಾಜ ನಾಯಕ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry