ತೆರಿಗೆಮುಕ್ತ ಗ್ರಾಚ್ಯುಟಿ ಮಿತಿ ಹೆಚ್ಚಳ: ಒಪ್ಪಿಗೆ

7

ತೆರಿಗೆಮುಕ್ತ ಗ್ರಾಚ್ಯುಟಿ ಮಿತಿ ಹೆಚ್ಚಳ: ಒಪ್ಪಿಗೆ

Published:
Updated:

ನವದೆಹಲಿ (ಪಿಟಿಐ): ಗ್ರಾಚ್ಯುಟಿ ಪಾವತಿ (ತಿದ್ದುಪಡಿ) ಮಸೂದೆ ಲೋಕಸಭೆಯಲ್ಲಿ ಅಂಗೀಕಾರವಾಗಿದೆ. ತೆರಿಗೆಮುಕ್ತ ಗ್ರಾಚ್ಯುಟಿ ಮೊತ್ತವನ್ನು ನಿರ್ಧರಿಸುವ ಅಧಿಕಾರವನ್ನು ಸರ್ಕಾರಕ್ಕೆ ನೀಡುವ ಪ್ರಸ್ತಾವ ಈ ಮಸೂದೆಯಲ್ಲಿ ಇದೆ.

ಏಳನೇ ವೇತನ ಆಯೋಗದ ಶಿಫಾರಸು ಜಾರಿಗೆ ಬಂದ ಬಳಿಕ ಕೇಂದ್ರ ಸರ್ಕಾರದ ನೌಕರರ ಗ್ರಾಚ್ಯುಟಿ ಮಿತಿ ₹10 ಲಕ್ಷದಿಂದ ₹20 ಲಕ್ಷಕ್ಕೆ ಏರಿಕೆ ಆಗಿದೆ.

ಈ ಬದಲಾವಣೆ ಕಾಯ್ದೆ ರೂಪದಲ್ಲಿ ಇರಬೇಕು ಎಂದು ಕಾರ್ಮಿಕ ಸಂಘಟನೆಗಳು ಒತ್ತಾಯಿಸಿದ್ದವು. ತೆರಿಗೆಮುಕ್ತ ಗ್ರಾಚ್ಯುಟಿ ಮೊತ್ತ ಈಗ ₹10 ಲಕ್ಷ ಇದೆ. ಅದನ್ನು ₹20 ಲಕ್ಷಕ್ಕೆ ಏರಿಸುವ ಪ್ರಸ್ತಾವ ಸರ್ಕಾರದ ಮುಂದೆ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry