ತೊಗರಿ ಸುರಿದು ಪ್ರತಿಭಟನೆ

7

ತೊಗರಿ ಸುರಿದು ಪ್ರತಿಭಟನೆ

Published:
Updated:
ತೊಗರಿ ಸುರಿದು ಪ್ರತಿಭಟನೆ

ವಿಜಯಪುರ: ತೊಗರಿ ಖರೀದಿ ಕೇಂದ್ರಗಳಲ್ಲಿ ಹಣ ವಸೂಲಿ ಮಾಡುತ್ತಿರುವುದನ್ನು ನಿಲ್ಲಿಸಬೇಕು, ರೈತರು ಬೆಳೆದ ಪೂರ್ಣ ಪ್ರಮಾಣದ ತೊಗರಿಯನ್ನು ಬೆಂಬಲ ಬೆಲೆಯಡಿ ಖರೀದಿಸಬೇಕು ಎಂದು ಆಗ್ರಹಿಸಿ ರೈತರು ನಗರದಲ್ಲಿ ರಸ್ತೆ ಮೇಲೆ ತೊಗರಿ ಸುರಿದು ಗುರುವಾರ

ಪ್ರತಿಭಟಿಸಿದರು.

ದೇವರಹಿಪ್ಪರಗಿಯ ಡಾ. ಗುರುರಾಜ ಗಡೇದ ಎಂಬುವವರು 20 ಕ್ವಿಂಟಲ್‌ ತೊಗರಿಯನ್ನು ಟ್ರ್ಯಾಕ್ಟರ್‌ನಲ್ಲಿ ತಂದು, ಅಂಬೇಡ್ಕರ್‌ ವೃತ್ತದಲ್ಲಿ ಸುರಿದು ನ್ಯಾಯಕ್ಕಾಗಿ ಆಗ್ರಹಿಸಿದರು. ಪ್ರತಿ ಕ್ವಿಂಟಲ್‌ಗೆ ₹250ರಂತೆ ಖರೀದಿ ಕೇಂದ್ರಗಳಲ್ಲಿ ವಸೂಲಿ ಮಾಡಿದ್ದು, ಅದನ್ನು ರೈತರಿಗೆ ವಾಪಸ್‌ ಕೊಡಿಸಬೇಕು ಎಂದು ಒತ್ತಾಯಿಸಿದರು.

‘ರೈತರ ಮುಗ್ಧತೆಯನ್ನೇ ಬಂಡವಾಳ ಮಾಡಿಕೊಂಡು, ತೊಗರಿ ಖರೀದಿ ಕೇಂದ್ರಗಳಲ್ಲಿ ರಾಜಾರೋಷವಾಗಿ ಅವ್ಯವಹಾರ ನಡೆಸಲಾಗುತ್ತಿದೆ. ಇದನ್ನು ತಡೆಗಟ್ಟುವಂತೆ ಫೆ.26ರಂದೇ ಜಿಲ್ಲಾಡಳಿತಕ್ಕೆ ಮನವಿ ನೀಡಿದ್ದರೂ ಸ್ಪಂದನೆ ಸಿಗಲಿಲ್ಲ. ಸತತ ಬರಕ್ಕೆ ತುತ್ತಾಗುವ ಜಿಲ್ಲೆಯ ರೈತರು ಸಂಕಷ್ಟದಲ್ಲಿದ್ದಾರೆ. ನೋಂದಣಿಯಾದ ರೈತರಿಂದ ಯಾವುದೇ ಕಾರಣಕ್ಕೂ ಖರೀದಿ ಪ್ರಕ್ರಿಯೆ ಸ್ಥಗಿತಗೊಳಿಸಬಾರದು’ ಎಂದು ಗಡೇದ ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry