7

ದಾಸ್ತಾನು ಕರಗಿಸುವ ಗಡುವು ವಿಸ್ತರಣೆ ಇಲ್ಲ: ಪಾಸ್ವಾನ್‌ ಸ್ಪಷ್ಟನೆ

Published:
Updated:
ದಾಸ್ತಾನು ಕರಗಿಸುವ ಗಡುವು ವಿಸ್ತರಣೆ ಇಲ್ಲ: ಪಾಸ್ವಾನ್‌ ಸ್ಪಷ್ಟನೆ

ನವದೆಹಲಿ (ಪಿಟಿಐ): ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೆ ಮುನ್ನ ವರ್ತಕರು ಖರೀದಿಸಿ ದಾಸ್ತಾನು ಇರಿಸಿದ್ದ ಸರಕುಗಳ ಮಾರಾಟದ ಗಡುವನ್ನು ವಿಸ್ತರಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

‘ಏಪ್ರಿಲ್‌ ತಿಂಗಳಿನಿಂದ ಪ್ಯಾಕೇಜ್ಡ್‌ ಉತ್ಪನ್ನಗಳ ಮೇಲೆ ಪರಿಷ್ಕೃತ ದರಗಳ ವಿವರ ಇರುವುದಿಲ್ಲ.  ಮಾರಾಟವಾಗದ ಸರಕಿನ ಮೇಲೆ ಹೆಚ್ಚುವರಿ

ಬೆಲೆ ನಮೂದಿಸಲು ಅವಕಾಶನೀಡುವುದಿಲ್ಲ. ಜಿಎಸ್‌ಟಿ ಮಂಡಳಿ ಅನುಮತಿ ನೀಡದಿದ್ದರೆ ಮಾರ್ಚ್‌ ತಿಂಗಳ ಗಡುವನ್ನು ವಿಸ್ತರಿಸುವುದಿಲ್ಲ’ ಎಂದು ಕೇಂದ್ರ ಗ್ರಾಹಕರ ವ್ಯವಹಾರ ಸಚಿವ ರಾಂ ವಿಲಾಸ್‌ ಪಾಸ್ವಾನ್‌  ಹೇಳಿದ್ದಾರೆ.

ಪ್ಯಾಕೇಜ್ಡ್‌  ಸರಕುಗಳ ಮೇಲೆ ಪರಿಷ್ಕೃತ ‘ಎಂಆರ್‌ಪಿ’ ಮುದ್ರಿಸಿ ಮಾರಾಟ ಮಾಡಿ ದಾಸ್ತಾನು ಕರಗಿಸಲು ಸರ್ಕಾರ ಈ ಮೊದಲೇ ಅನುಮತಿ ನೀಡಿತ್ತು.

ಈ ಗಡುವನ್ನು ಆರಂಭದಲ್ಲಿ ಸೆಪ್ಟೆಂಬರ್‌ ತಿಂಗಳವರೆಗೆ ಮತ್ತು ಆನಂತರ ಮಾರ್ಚ್‌ವರೆಗೆ ವಿಸ್ತರಿಸಲಾಗಿತ್ತು.

ನವೆಂಬರ್‌ ತಿಂಗಳಿನಲ್ಲಿ 200 ಸರಕುಗಳ ಮೇಲಿನ ಜಿಎಸ್‌ಟಿ ದರ ಕಡಿತ ಮಾಡಿದಾಗಲೂ, ಹಳೆಯ ಸರಕಿನ ಮೇಲೆ ಹೆಚ್ಚುವರಿ ಬೆಲೆ ವಿವರ ನಮೂದಿಸಿ ಮಾರಾಟ ಮಾಡಲು ಗ್ರಾಹಕರ ವ್ಯವಹಾರ ಸಚಿವಾಲಯವು ವರ್ತಕರಿಗೆ ಅನುಮತಿ ನೀಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry