ಅಗ್ಗದ ನಗರಗಳ ಪಟ್ಟಿಯಲ್ಲಿ ಬೆಂಗಳೂರು

7

ಅಗ್ಗದ ನಗರಗಳ ಪಟ್ಟಿಯಲ್ಲಿ ಬೆಂಗಳೂರು

Published:
Updated:
ಅಗ್ಗದ ನಗರಗಳ ಪಟ್ಟಿಯಲ್ಲಿ ಬೆಂಗಳೂರು

ನವದೆಹಲಿ (ಪಿಟಿಐ): ವಿಶ್ವದ ಅತ್ಯಂತ ಅಗ್ಗದ ನಗರಗಳ ಪಟ್ಟಿಯಲ್ಲಿ ಬೆಂಗಳೂರು, ದೆಹಲಿ ಮತ್ತು ಚೆನ್ನೈ ಸ್ಥಾನ ಪಡೆದುಕೊಂಡಿವೆ.

ವಿಶ್ವದಾದ್ಯಂತ ನಡೆಸಿರುವ ಜೀವನ ಮಟ್ಟ ನಿರ್ವಹಣಾ ವೆಚ್ಚ ಆಧರಿಸಿದ ಸಮೀಕ್ಷೆಯಿಂದ ಈ ಮಾಹಿತಿ ತಿಳಿದುಬಂದಿದೆ.

ದಕ್ಷಿಣ ಏಷ್ಯಾದ ನಗರಗಳು ಅದರಲ್ಲಿಯೂ ಭಾರತ ಮತ್ತು ಪಾಕಿಸ್ತಾನದ ನಗರಗಳಲ್ಲಿ ಹಣಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಪ್ರಮುಖ 10 ನಗರಗಳ ಪಟ್ಟಿಯಲ್ಲಿ ಬೆಂಗಳೂರು, ಚೆನ್ನೈ, ನವದೆಹಲಿ ಮತ್ತು ಕರಾಚಿ ಸ್ಥಾನ ಪಡೆದಿವೆ.

ದೇಶದಲ್ಲಿ ಆರ್ಥಿಕ ಬೆಳವಣಿಗೆ ವೇಗ ಹೆಚ್ಚಿದೆ. ಆದರೆ, ತಲಾ ಆದಾಯ ಮತ್ತು ವೆಚ್ಚದ ಪ್ರಮಾಣ ಕಡಿಮೆ ಇದೆ. ಆದಾಯದಲ್ಲಿನ ಅಸಮಾನತೆಯೂ ಕೌಟುಂಬಿಕ ವೆಚ್ಚಕ್ಕೆ ಕಡಿವಾಣ ವಿಧಿಸಿದೆ.

ಗ್ರಾಮೀಣ ಭಾಗದಿಂದ ನಗರಗಳಿಗೆ ಅಗ್ಗದ ಬೆಲೆಗೆ ಹೆಚ್ಚು ಸರಕುಗಳು ಪೂರೈಕೆಯಾಗುತ್ತಿವೆ. ಸರ್ಕಾರ ಕೆಲವು ಉತ್ಪನ್ನಗಳಿಗೆ ಸಬ್ಸಿಡಿಯನ್ನೂ ನೀಡುತ್ತಿದೆ. ಇದರಿಂದ ಉತ್ಪನ್ನಗಳ ಬೆಲೆ ಕಡಿಮೆಯಾಗಿದೆ. ಹೀಗಾಗಿ ಪಾಶ್ಚಿಮಾತ್ಯ ಮಾನದಂಡಗಳ ಪ್ರಕಾರ ದಕ್ಷಿಣ ಏಷ್ಯಾದ ಕೆಲ ನಗರಗಳಲ್ಲಿ ಜೀವನ ನಿರ್ವಹಣಾ ವೆಚ್ಚ ಕಡಿಮೆ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry