ಮೆಸ್ಸಿ ಗೋಲಿನ ‘ಶತಕ’

ಬುಧವಾರ, ಮಾರ್ಚ್ 20, 2019
23 °C

ಮೆಸ್ಸಿ ಗೋಲಿನ ‘ಶತಕ’

Published:
Updated:
ಮೆಸ್ಸಿ ಗೋಲಿನ ‘ಶತಕ’

ಬಾರ್ಸಿಲೋನಾ (ಎಎಫ್‌ಪಿ): ಬಾರ್ಸಿಲೋನಾದ ಆಟಗಾರ ಲಯೊನೆಲ್‌ ಮೆಸ್ಸಿ ಗುರುವಾರ ಹೊಸ ಮೈಲುಗಲ್ಲು ಸ್ಥಾಪಿಸಿದರು. ಅವರು ಯುಇಎಫ್‌ಎ ಚಾಂಪಿಯನ್ಸ್‌ ಲೀಗ್‌ನಲ್ಲಿ 100 ಗೋಲು ಬಾರಿಸಿದರು. ಇದರೊಂದಿಗೆ ಈ ಸಾಧನೆ ಮಾಡಿದ ಎರಡನೇ ಆಟಗಾರ ಎಂಬ ಹಿರಿಮೆ ತಮ್ಮದಾಗಿಸಿಕೊಂಡರು.

ರಿಯಲ್‌ ಮ್ಯಾಡ್ರಿಡ್‌ ತಂಡದ ಕ್ರಿಸ್ಟಿಯಾನೊ ರೊನಾಲ್ಡೊ ಮೊದಲು ‘ಶತಕ’ದ ಸಾಧನೆ ಮಾಡಿದ್ದರು. 152 ಪಂದ್ಯಗಳನ್ನು ಆಡಿರುವ ರೊನಾಲ್ಡೊ 117 ಗೋಲು ದಾಖಲಿಸಿದ್ದಾರೆ.

ಕ್ಯಾಂಪ್ ನೊವ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪ್ರೀ ಕ್ವಾರ್ಟರ್‌ ಫೈನಲ್‌ ಎರಡನೇ ಲೆಗ್‌ನ ಪಂದ್ಯದಲ್ಲಿ ಬಾರ್ಸಿಲೋನಾ 3–0 ಗೋಲುಗಳಿಂದ ಚೆಲ್ಸಿ ತಂಡವನ್ನು ಸೋಲಿಸಿತು.

ಚಾಂಪಿಯನ್ಸ್‌ ಲೀಗ್‌ನಲ್ಲಿ 123ನೇ ಪಂದ್ಯ ಆಡಿದ ಮೆಸ್ಸಿ ಮೂರನೇ ನಿಮಿಷದಲ್ಲಿ ಚೆಂಡನ್ನು ಗುರಿ ಮುಟ್ಟಿಸಿದರು. 20ನೇ ನಿಮಿಷದಲ್ಲಿ ಒಸುಮಾನೆ ಡೆಂಬೆಲೆ ಗೋಲು ತಂದಿತ್ತರು. ಹೀಗಾಗಿ ಬಾರ್ಸಿಲೋನಾ 2–0ರ ಮುನ್ನಡೆ ಗಳಿಸಿತು.

63ನೇ ನಿಮಿಷದಲ್ಲಿ ಮತ್ತೊಮ್ಮೆ ಕಾಲ್ಚಳಕ ತೋರಿದ ಮೆಸ್ಸಿ, ಚೆಲ್ಸಿ ತಂಡದ ಗೆಲುವಿನ ಕನಸಿಗೆ ತಣ್ಣೀರು ಸುರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry