ಕನ್ನಡಿಗ ರಾಹುಲ್‌ಗೆ ವಿಸ್ಡನ್ ಗೌರವ

7

ಕನ್ನಡಿಗ ರಾಹುಲ್‌ಗೆ ವಿಸ್ಡನ್ ಗೌರವ

Published:
Updated:

ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಆಟಗಾರ ಕೆ.ಎಲ್. ರಾಹುಲ್ ಅವರಿಗೆ ವಿಸ್ಡನ್ ಇಂಡಿಯಾ ಆಲ್ಮನ್ಯಾಕ್‌ನ ‘ವರ್ಷದ ಕ್ರಿಕೆಟಿಗ’ ಗೌರವ ಲಭಿಸಿದೆ.

ಈ ವರ್ಷದ ವಿಸ್ಡನ್ ಇಂಡಿಯಾ ಅಲ್ಮನ್ಯಾಕ್  ವಾರ್ಷಿಕ ಪುಸ್ತಕದ ಮುಖಪುಟದಲ್ಲಿ ಭಾರತ ಮಹಿಳೆಯ ಕ್ರಿಕೆಟ್‌ ತಂಡದ  ಆಟಗಾರ್ತಿಯರ ಚಿತ್ರವನ್ನು ಪ್ರಕಟಿಸಿದೆ. ಕಳೆದ ವಿಶ್ವಕಪ್ ಟೂರ್ನಿಯಲ್ಲಿ ಮಹಿಳೆಯರ ಸಾಧನೆಗೆ ಈ ಗೌರವ ಸಲ್ಲಿಸಲಾಗಿದೆ. ಮಹಿಳಾ ತಂಡದ ದೀಪ್ತಿ ಶರ್ಮಾ ಅವರಿಗೆ ವರ್ಷದ ಆಟಗಾರ್ತಿ ಗೌರವ ನೀಡಲಾಗಿದೆ.

ಹಿರಿಯ ಆಟಗಾರ್ತಿ ಶಾಂತಾ ರಂಗಸ್ವಾಮಿ ಮತ್ತು ಹಿರಿಯ ಸ್ಪಿನ್ನರ್ ಎರ್ರಪಳ್ಳಿ ಪ್ರಸನ್ನ ಅವರಿಗೆ ಹಾಲ್‌ ಆಫ್‌ ಫೇಮ್ ಗೌರವ ನೀಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry