ಸಿಒಎಗೆ ಎಫ್‌ಐಆರ್‌ ಪ್ರತಿ ಕಳಿಸಿದ ಶಮಿ ಪತ್ನಿ

7

ಸಿಒಎಗೆ ಎಫ್‌ಐಆರ್‌ ಪ್ರತಿ ಕಳಿಸಿದ ಶಮಿ ಪತ್ನಿ

Published:
Updated:

ಕೋಲ್ಕತ್ತ (ಪಿಟಿಐ): ಹಸೀನಾ ಜಹಾನ್ ಅವರು ತಮ್ಮ ಪತಿ, ಕ್ರಿಕೆಟಿಗ ಮಹಮ್ಮದ್ ಶಮಿಯ ವಿರುದ್ಧ ದಾಖಲಿಸಿದ್ದ ಎಫ್‌ಐಆರ್‌ ಪ್ರತಿಯನ್ನು ಬಿಸಿಸಿಐ ಆಡಳಿತಾಧಿಕಾರಿಗಳ ಸಮಿತಿ (ಸಿಒಎ) ಮುಖ್ಯಸ್ಥ ವಿನೋದ್ ರಾಯ್‌ ಅವರಿಗೆ ಕಳಿಸಿದ್ದಾರೆ.

‘ಭ್ರಷ್ಟಾಚಾರದ ಬಗ್ಗೆ ಹಸೀನಾ ಅವರು ಮಾಡಿರುವ ಆರೋಪಗಳ ಕುರಿತು ತನಿಖೆ ನಡೆಸಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಎಫ್‌ಐಆರ್ ಪ್ರತಿ ಕಳಿಸಲಾಗಿದೆ’ ಎಂದು ಹಸೀನಾ ಪರ ವಕೀಲರಾದ ಜಾಕೀರ್ ಹುಸೇನ್ ಹೇಳಿದ್ದಾರೆ.

ಕ್ರಿಕೆಟಿಗ ಶಮಿ ಪಾಕಿಸ್ತಾನ ಮಹಿಳೆಯಿಂದ ಹಣ ಪಡೆದು ಮ್ಯಾಚ್ ಫಿಕ್ಸಿಂಗ್ ಮಾಡಿದ್ದಾರೆ ಎಂದು ಹಸೀನಾ ಆರೋಪಿಸಿದ್ದರು. ಈ ಸಂಬಂಧ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭ್ರಷ್ಟಾಚಾರ ತಡೆ ಘಟಕಕ್ಕೆ (ಎಸಿಯು) ತನಿಖೆ ನಡೆಸುವಂತೆ ಸೂಚಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry