ಕ್ರಾಸ್ ಕಂಟ್ರಿ: ಸಂಜೀವನಿಗೆ ಕಂಚು

7

ಕ್ರಾಸ್ ಕಂಟ್ರಿ: ಸಂಜೀವನಿಗೆ ಕಂಚು

Published:
Updated:

ಗುಯಾಂಗ್‌, ಚೀನಾ (ಪಿಟಿಐ): ಭಾರತದ ಸಂಜೀವನಿ ಜಾಧವ್‌ ಇಲ್ಲಿ ನಡೆದ ಏಷ್ಯನ್‌ ಕ್ರಾಸ್ ಕಂಟ್ರಿ ಚಾಂಪಿಯನ್‌ಷಿಪ್‌ನಲ್ಲಿ ಗುರುವಾರ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.

ಮಹಿಳೆಯರ 8ಕಿ.ಮೀ ಕ್ರಾಸ್‌ಕಂಟ್ರಿ ಓಟದಲ್ಲಿ 20 ವರ್ಷದ ಸಂಜೀವನಿ ಮೂರನೇ ಸ್ಥಾನ ಪಡೆದರು. ಅವರು 28ನಿಮಿಷ 19 ಸೆಕುಂಡುಗಳಲ್ಲಿ  ಗುರಿ ಮುಟ್ಟಿದರು. ಈ ವಿಭಾಗದಲ್ಲಿ ಚೀನಾದ ಲಿ ಡಾನ್‌ (28:03) ಚಿನ್ನ ಗೆದ್ದರೆ, ಜಪಾನ್‌ನ ಅಬೆ ಯಕಾರಿ (28:06ಸೆ) ಬೆಳ್ಳಿಗೆ ಕೊರಳೊಡ್ಡಿದರು.

ಸಂಜೀವನಿ, ಸ್ವಾತಿ ಗಢವೆ, ಜುಮಾ ಖಾತೂನ್ ಮತ್ತು ಲಲಿತಾ ಬಾಬರ್ ಅವರನ್ನು ಒಳಗೊಂಡ ಭಾರತ ಮಹಿಳೆಯರ ತಂಡ ಕೂಡ ಕಂಚು ಗೆದ್ದಿದೆ.

ಇಲ್ಲಿ ನಡೆದ ವೈಯಕ್ತಿಕ ವಿಭಾಗದಲ್ಲಿ ಗಢವೆ 11ನೇ ಸ್ಥಾನ ಹಾಗೂ ಖಾತೂನ್ 14ನೇ ಸ್ಥಾನ ಗಳಿಸಿದರು. ಫೈನಲ್‌ ತಲುಪಿದ್ದ ಬಾಬರ್ ಕೊನೆಯ ಸ್ಥಾನ ಪಡೆದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry