ಶ್ರೀಲಂಕಾಕ್ಕೆ ಇಂಗ್ಲೆಂಡ್ ತಂಡ ಪ್ರವಾಸ

7

ಶ್ರೀಲಂಕಾಕ್ಕೆ ಇಂಗ್ಲೆಂಡ್ ತಂಡ ಪ್ರವಾಸ

Published:
Updated:

ಕೊಲಂಬೊ (ಎಎಫ್‌ಪಿ): ಆರು ವರ್ಷಗಳ ಬಳಿಕ ಇಂಗ್ಲೆಂಡ್ ಕ್ರಿಕೆಟ್ ತಂಡ ಶ್ರೀಲಂಕಾಕ್ಕೆ ಪ್ರಯಾಣ ಮಾಡಲಿದೆ.

ಪ್ರವಾಸದಲ್ಲಿ ಇಂಗ್ಲೆಂಡ್ ಹಾಗೂ ಶ್ರೀಲಂಕಾ ತಂಡಗಳು ಮೂರು ಟೆಸ್ಟ್‌, ಐದು ಏಕದಿನ ಪಂದ್ಯಗಳ ಸರಣಿ ಆಡಲಿವೆ. ಜೊತೆಗೆ ಒಂದು ಟ್ವೆಂಟಿ–20 ಪಂದ್ಯ ಕೂಡ ಆಯೋಜನೆಗೊಂಡಿದೆ.

ಅಕ್ಟೋಬರ್‌ 10ರಿಂದ ಸರಣಿ ಆರಂಭವಾಗಲಿದೆ. ಮೊದಲ ಏಕದಿನ ಪಂದ್ಯ ದಂಬುಲ್ಲಾದಲ್ಲಿ ನಡೆಯಲಿದೆ. ಸರಣಿಯ ಮೂರು ಏಕದಿನ ಹಾಗೂ ಒಂದು ಟ್ವೆಂಟಿ–20 ಪಂದ್ಯ ಹೊನಲು ಬೆಳಕಿನಲ್ಲಿ ಆಯೋಜನೆಗೊಂಡಿದೆ.

ಗಾಲ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮೊದಲ ಟೆಸ್ಟ್‌ ಪಂದ್ಯ ನಡೆಯಲಿದೆ. ಪಲ್ಲೆಕೆಲೆ ಅಂಗಳದಲ್ಲಿ ಉಳಿದ ಎರಡು ಪಂದ್ಯಗಳು ನಡೆಯುತ್ತವೆ. ಪ್ರವಾಸದ ಅಂತಿಮ ಪಂದ್ಯ (ಟೆಸ್ಟ್‌) ನವೆಂಬರ್‌ 23ರಿಂದ ಆರಂಭವಾಗಲಿದೆ.

2012ರಲ್ಲಿ ಶ್ರೀಲಂಕಾ ತಂಡ ಇಂಗ್ಲೆಂಡ್‌ಗೆ ಪ್ರವಾಸ ಮಾಡಿತ್ತು. ಎರಡು ಪಂದ್ಯಗಳ ಟೆಸ್ಟ್ ಸರಣಿ 1–1ರಲ್ಲಿ ಸಮಬಲಗೊಂಡಿತ್ತು. 2016ರಲ್ಲಿ ಶ್ರೀಲಂಕಾ ತಂಡ ಇಂಗ್ಲೆಂಡ್‌ನಲ್ಲಿ ಮೂರು ಟೆಸ್ಟ್‌, ಐದು ಏಕದಿನ, ಒಂದು ಟ್ವೆಂಟಿ–20 ಪಂದ್ಯ ಆಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry