ಚಿನ್ನದ ಅಂಗಡಿ ಮೇಲೆ ಅಧಿಕಾರಿಗಳ ದಾಳಿ

7

ಚಿನ್ನದ ಅಂಗಡಿ ಮೇಲೆ ಅಧಿಕಾರಿಗಳ ದಾಳಿ

Published:
Updated:

ಹುಮನಾಬಾದ್: ಪಟ್ಟಣದ ಬಾಲಾಜಿ ವೃತ್ತದಲ್ಲಿ ನಾಲ್ಕು ಚಿನ್ನದ ಅಂಗಡಿಗಳ ಮೇಲೆ ಗುರುವಾರ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದರು.

ಅಧಿಕ ವ್ಯವಹಾರ ನಡೆದರೂ ತೆರಿಗೆಯಿಂದ ತಪ್ಪಿಸಿಕೊಳ್ಳುವವ ಉದ್ದೇಶದಿಂದ ವ್ಯವಹಾರ ಕಡಿಮೆ ನಡೆದಿರುವುದಾಗಿ ದಾಖಲೆ ಸೃಷ್ಟಿಸಿ ಸರ್ಕಾರಕ್ಕೆ ತೆರಿಗೆ ಪಾವತಿಸದಿರುವುದು ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆಯಲ್ಲಿ ಬೀದರ್‌ ಮತ್ತು ಕಲಬುರ್ಗಿ ಕಚೇರಿಯ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದು, ಕೆಲ ಮಹತ್ವದ ದಾಖಲೆ ಲಭ್ಯವಾಗಿವೆ ಎಂದು ಮೂಲಗಳುತಿಳಿಸಿವೆ.

ಚಿನ್ನದ ಅಂಗಡಿ ಬಂದ್‌: ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ ವಿಷಯ ತಿಳಿಯುತ್ತಿದ್ದಂತೆ ನಗರದಲ್ಲಿರುವ ಬಹುತೇಕ ಬಂಗಾರದ ಅಂಗಡಿ ಮಾಲೀಕರು ಬೀಗ ಹಾಕಿರುವುದು ಕಂಡು ಬಂತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry