ಬೈತಖೋಲ್‌: ‘ಇನ್‌ಸ್ಪೆಕ್ಟರ್ ವಿಕ್ರಂ’ ಚಿತ್ರೀಕರಣ

7
ನಟ ಪ್ರಜ್ವಲ್ ದೇವರಾಜ್, ನಟಿ ಭಾವನಾ ಮೆನನ್‌ ಅಭಿನಯದ ಚಿತ್ರ

ಬೈತಖೋಲ್‌: ‘ಇನ್‌ಸ್ಪೆಕ್ಟರ್ ವಿಕ್ರಂ’ ಚಿತ್ರೀಕರಣ

Published:
Updated:
ಬೈತಖೋಲ್‌: ‘ಇನ್‌ಸ್ಪೆಕ್ಟರ್ ವಿಕ್ರಂ’ ಚಿತ್ರೀಕರಣ

ಕಾರವಾರ: ನಟ ಪ್ರಜ್ವಲ್ ದೇವರಾಜ್, ನಟಿ ಭಾವನಾ ಮೆನನ್‌ ಅಭಿನಯದ ‘ಇನ್‌ಸ್ಪೆಕ್ಟರ್ ವಿಕ್ರಂ’ನ ದೃಶ್ಯವೊಂದರ ಚಿತ್ರೀಕರಣವು ಗುರುವಾರ ಇಲ್ಲಿನ ಬೈತಖೋಲ್‌ನಲ್ಲಿ ನಡೆಯಿತು.

ರಮೇಶ್ ಅರವಿಂದ್ ಅಭಿನಯದ ‘ಪುಷ್ಪಕ ವಿಮಾನ’ ಚಿತ್ರದ ನಿರ್ಮಾಪಕ ವಿಖ್ಯಾತ್ ಅವರ ನಿರ್ಮಾಣದ ಎರಡನೇ ಚಿತ್ರ ಇದಾಗಿದೆ.

ಶ್ರೀನರಸಿಂಹ ನಿರ್ದೇಶನದ ಮೊದಲ ಸಿನಿಮಾದಲ್ಲಿ ಪ್ರಜ್ವಲ್ ಅವರು ಪೊಲೀಸ್ ಅಧಿಕಾರಿ ಪಾತ್ರ ನಿರ್ವಹಿಸುತ್ತಿದ್ದಾರೆ.

ಚಿತ್ರದಲ್ಲಿ ಭಾವನಾ ಮೆನನ್ ಅವರು ಪ್ರಜ್ವಲ್‌ಗೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ವಿವಾಹದ ಬಳಿಕ ಅವರು ನಟಿಸುತ್ತಿರುವ

ಮೊದಲ ಚಿತ್ರ ಇದಾಗಿದೆ. ನಟ ಶೋಭರಾಜ್ ಕೂಡ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಚರಣರಾಜ್ ಅವರು ಚಿತ್ರಕ್ಕೆ ಸಂಗೀತ

ನೀಡಿದ್ದು, ನವೀನಕುಮಾರ್ ಛಾಯಾಗ್ರಹಣ ಇದೆ.

‘ಈ ಚಿತ್ರದಲ್ಲಿ ನಿರ್ದೇಶಕರು ಈಗಿನ ಟ್ರೆಂಡ್‌ಗೆ ಸೂಕ್ತವಾದ ಕಥೆಯನ್ನು ಹೆಣೆದಿದ್ದಾರೆ. ಹಾಸ್ಯ ಹಾಗೂ ಸಾಹಸಮಯ ಚಿತ್ರ ಇದಾಗಲಿದೆ. ಕುಟುಂಬ ಸಹಿತ ನೋಡಬಹುದಾದ ಚಿತ್ರ ನೀಡಲು ತಂಡ ಶ್ರಮಿಸುತ್ತಿದೆ. ಗೋಕರ್ಣದಲ್ಲಿ ಈಗಾಗಲೇ ಒಂದು ವಾರದವರೆಗೆ ಚಿತ್ರೀಕರಣ ನಡೆಸಲಾಗಿದೆ’ ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry