ಎಎಪಿ ಪಂಜಾಬ್ ಘಟಕದ ಅಧ್ಯಕ್ಷ ಸ್ಥಾನಕ್ಕೆ ಭಗವಂತ್ ಮಾನ್ ರಾಜೀನಾಮೆ

ಶನಿವಾರ, ಮಾರ್ಚ್ 23, 2019
21 °C

ಎಎಪಿ ಪಂಜಾಬ್ ಘಟಕದ ಅಧ್ಯಕ್ಷ ಸ್ಥಾನಕ್ಕೆ ಭಗವಂತ್ ಮಾನ್ ರಾಜೀನಾಮೆ

Published:
Updated:
ಎಎಪಿ ಪಂಜಾಬ್ ಘಟಕದ ಅಧ್ಯಕ್ಷ ಸ್ಥಾನಕ್ಕೆ ಭಗವಂತ್ ಮಾನ್ ರಾಜೀನಾಮೆ

ಚಂಡೀಗಡ: ಪಂಜಾಬ್‌ನ ಮಾಜಿ ಸಚಿವ ಬಿಕ್ರಂ ಸಿಂಗ್‌ ಮಜಿತಿಯಾ ಬಳಿ ದೆಹಲಿ ಮುಖ್ಯಮಂತ್ರಿ, ಎಎಪಿ ವರಿಷ್ಠ ಅರವಿಂದ ಕೇಜ್ರಿವಾಲ್ ಕ್ಷಮೆ ಕೇಳಿದ ಬೆನ್ನಲೇ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸಂಸದರಾದ ಭಗವಂತ್ ಮಾನ್ ರಾಜೀನಾಮೆ ನೀಡಿದ್ದಾರೆ.

ಕೇಜ್ರಿವಾಲ್ ಅವರು ಸಚಿವರ ಬಳಿ ಕ್ಷಮೆ ಕೇಳಿರುವುದರಿಂದ ಅಸಮಾಧಾನಗೊಂಡು ಮಾನ್ ರಾಜೀನಾಮೆ ನೀಡಿದ್ದಾರೆ ಎನ್ನಲಾಗುತ್ತಿದೆ.

‘ಎಎಪಿಯ ಪಂಜಾಬ್ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಆದರೆ ಆಮ್ ಆದ್ಮಿಯಾಗಿ ಮುಂದುವರಿಯಲಿದ್ದು, ಮಾದಕವಸ್ತು ದಂಧೆ ಮತ್ತು ಎಲ್ಲ ರೀತಿಯ ಭ್ರಷ್ಟಾಚಾರದ ವಿರುದ್ಧ ಹೋರಾಟ ಮುಂದುವರಿಸಲಿದ್ದೇನೆ’ ಎಂದು ಮಾನ್ ಟ್ವೀಟ್ ಮಾಡಿದ್ದಾರೆ.

ಕ್ಷಮೆ ಕೇಳಿದ್ದ ಕೇಜ್ರಿವಾಲ್: ಬಿಕ್ರಂ ಸಿಂಗ್‌ ಮಜಿತಿಯಾ ಮಾದಕ ವಸ್ತು ದಂಧೆಯಲ್ಲಿ ಭಾಗಿಯಾಗಿದ್ದು, ಆರೋಪಿಗಳಿಗೆ ರಕ್ಷಣೆ ನೀಡಿದ್ದಾರೆ ಎಂದು ಪಂಜಾಬ್ ವಿಧಾನಸಭೆ ಚುನಾವಣೆ ಸಂದರ್ಭ ಕೇಜ್ರಿವಾಲ್ ಆರೋಪ ಮಾಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿ ಮಜಿತಿಯಾ ಅವರು ಕೇಜ್ರಿವಾಲ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಆಧಾರರಹಿತ ಆರೋಪ ಮಾಡಿದ ವಿಷಯಕ್ಕೆ ಸಂಬಂಧಿಸಿ ಕೇಜ್ರಿವಾಲ್ ಗುರುವಾರ ಕ್ಷಮೆ ಕೋರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry