ಸಿಲ್ವರ್‌ ಜ್ಯೂಬಿಲಿ ಪಾರ್ಕ್‌ನಲ್ಲಿ ಇಂದಿನಿಂದ ಕಮಲಜಾತ್ರೆ

7

ಸಿಲ್ವರ್‌ ಜ್ಯೂಬಿಲಿ ಪಾರ್ಕ್‌ನಲ್ಲಿ ಇಂದಿನಿಂದ ಕಮಲಜಾತ್ರೆ

Published:
Updated:

ಮಂಡ್ಯ: ಬಿಜೆಪಿ ವತಿಯಿಂದ ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್‌ನಲ್ಲಿ ಮಾ.16ರಿಂದ ಕಮಲ ಜಾತ್ರೆ ನಡೆಯಲಿದೆ.

ಕಮಲ ಜಾತ್ರೆ ಅಂಗವಾಗಿ ವಿವಿಧ ಕಾರ್ಯಕ್ರಮ ನಡೆಯಲಿದ್ದು ಮಧ್ಯಾಹ್ನ 3 ರಿಂದ ರಾತ್ರಿ 10 ರವರೆಗೆ ನಡೆಯಲಿದೆ. ಹಿಂದಿನ ರಾಜ್ಯ ಸರ್ಕಾರ ನೀಡಿದ ಕೊಡುಗೆ ಹಾಗೂ ದೇಶದ ಜನಕಲ್ಯಾಣಕ್ಕಾಗಿ ಮೋದಿ ಸರ್ಕಾರ ಜಾರಿಗೆ ತಂದಿರುವ ಕಾರ್ಯ ಯೋಜನೆಗಳನ್ನು ಜನರಿಗೆ ತಿಳಿಸುವ ವಿಶೇಷ ಕಾರ್ಯಕ್ರಮ ಇದಾಗಿದೆ. ಬಿಜೆಪಿ ಆಡಳಿತದ ಬಗ್ಗೆ ಯುವಕರು ಹಾಗೂ ಸಾರ್ವಜನಿಕರೊಂದಿಗೆ ಚಾಯ್‌ಪೆ ಚರ್ಚೆ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಲೇಸರ್ ಶೋ, ಮಲ್ಲಕಂಬ ಪ್ರದರ್ಶನ, ಮಕ್ಖಳಿಗೆ ಕ್ರೀಡೆ, ನಗೆ ಹಬ್ಬ, ಚಲನಚಿತ್ರ ಪ್ರದರ್ಶನ, ನೃತ್ಯ, ಸೆಲ್ಫಿ ಬೂತ್, ಜಾದೂ ಪ್ರದರ್ಶನದಂತದಹ ಮನರಂಜನೆ ಕಾರ್ಯಕ್ರಮಗಳು ನಡೆಯಲಿವೆ. ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಗುತ್ತದೆ.

ಉಚಿತವಾಗಿ ಯುವತಿಯರಿಗೆ ಮೆಹಂದಿ ಹಾಗೂ ಯುವಕರಿಗೆ ಟ್ಯಾಟೂ ಹಾಕಲಾಗುವುದು ಎಂದು ಬಿಜೆಪಿ ಮುಖಂಡರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry