ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯದಲ್ಲಿ ಗುಡುಗು ಸಹಿತ ಧಾರಾಕಾರ ಮಳೆ

Last Updated 16 ಮಾರ್ಚ್ 2018, 9:03 IST
ಅಕ್ಷರ ಗಾತ್ರ

ಮಂಡ್ಯ: ನಗರದಲ್ಲಿ ಗುರುವಾರ ಸಂಜೆ ಗಂಟೆಗೂ ಹೆಚ್ಚು ಕಾಲ ಗುಡುಗು, ಮಿಂಚು ಸಮೇತ ಧಾರಾಕಾರ ಮಳೆ ಸುರಿದು ವಾತಾವರಣವನ್ನು ತಂಪುಗೊಳಿಸಿತು.

ಬೆಳಿಗ್ಗೆಯಿಂದಲೂ ಮೋಡ ಮುಚ್ಚಿದ ವಾತಾವರಣ ಇತ್ತು. ಮಧ್ಯಾಹ್ನ 3 ಗಂಟೆಗೆ ಆರಂಭವಾದ ಮಳೆ ಗಾಳಿ, ಗುಡುಗು ಸಹಿತ 20 ನಿಮಿಷ ಸುರಿಯಿತು. ಮತ್ತೆ ಸಂಜೆ 6 ಗಂಟೆಗೆ ಆರಂಭವಾಧ ಮಳೆ ಒಂದು ಗಂಟೆಕಾಲ ಸುರಿಯಿತು. ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ ಸೇರಿ ನೂರು ಅಡಿ ರಸ್ತೆ, ವಿವಿ ರಸ್ತೆ, ಆರ್‌ಪಿ ರಸ್ತೆಗಳಲ್ಲಿ ನೀರು ಹರಿಯಿತು. ಮಳೆಯಿಂದ ಬೀದಿಬದಿ ವ್ಯಾಪಾರಿಗಳು, ಶಾಲಾ ಮಕ್ಕಳು ಪರದಾಡಿದರು. ಕೆಲವರು ಕೊಡೆ ಹಿಡಿದು ಮಳೆಯಿಂದ ರಕ್ಷಿಸಿಕೊಂಡರು. ವಾಹನ ಸವಾರರು ಮರದ ಕೆಳಗೆ ವಾಹನ ನಿಲ್ಲಿಸಿ ರಕ್ಷಣೆ ಪಡೆದರು.

ಮದ್ದೂರು ಪಟ್ಟಣದಲ್ಲೂ ಉತ್ತಮ ಮಳೆಯಾಗಿದೆ. ಮಳವಳ್ಳಿ, ಕೆ.ಆರ್‌.ಪೇಟೆ, ಪಾಂಡವಪುರ, ನಾಗಮಂಗಲ ತಾಲ್ಲೂಕಿನಲ್ಲೂ ತುಂತುರು ಮಳೆಯಾಗಿದೆ.

ಮದ್ದೂರಿನಲ್ಲಿ ಉತ್ತಮ ಮಳೆ
ಮದ್ದೂರು:
ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಗುರುವಾರ ಸಂಜೆ ಗುಡುಗು ಸಹಿತ ಮಳೆ ಉತ್ತಮವಾಗಿ ಬಿದ್ದಿದೆ

ಸಂಜೆ 6 ಗಂಟೆಗೆ ಆರಂಭಗೊಂಡ ಮಳೆ ಒಂದು ಗಂಟೆಗಳ ಕಾಲ ಉತ್ತಮವಾಗಿ ಬಿದ್ದಿತ್ತು.

ರೈತರು ಭತ್ತ ಹಾಗೂ ಇನ್ನಿತರ ಬೆಳೆಗಳ ನಾಟಿ ಮಾಡಿದ್ದು ಮಳೆ ಬೆಳೆಗೆ ಅನುಕೂಲವಾಗಿರುವುದರಿಂದ ರೈತರ ಖುಷಿ ಹೆಚ್ಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT