ಮಾಜಿ ಸಚಿವ ಪುತ್ರನ ಮೇಲೆ ಹಲ್ಲೆ

7
ತಂದೆಯ ಸಾವು ಶಂಕಿಸಿ ಫೇಸ್‌ಬುಕ್‌ನಲ್ಲಿ ಪೋಸ್ಟ್‌

ಮಾಜಿ ಸಚಿವ ಪುತ್ರನ ಮೇಲೆ ಹಲ್ಲೆ

Published:
Updated:

ಕಲಬುರ್ಗಿ: ಮಾಜಿ ಸಚಿವ ಸಿ.ಗುರುನಾಥ ಅವರ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿದ್ದ ಅವರ ಪುತ್ರನ ರಘುನಾಥ ಕಂಬಾನೂರ ಮೇಲೆ ಬುಧವಾರ ರಾತ್ರಿ ಹಲ್ಲೆ ನಡೆದಿದೆ.

ಹಲ್ಲೆಯಿಂದ ರಘುನಾಥ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರ ಮುಖ, ಕಣ್ಣಿನ ಭಾಗದಲ್ಲಿ ಪೆಟ್ಟಾಗಿದೆ. ಎರಡು ವರ್ಷಗಳ ಹಿಂದೆ ಗುರುನಾಥ ಅವರು ಬೆಂಗಳೂರಿನ ಆಸ್ಪತ್ರೆಯೊಂದರ ಮೂರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.

‘ನನ್ನ ತಂದೆ ಆತ್ಮಹತ್ಯೆ ಮಾಡಿಕೊಂಡಿಲ್ಲ. ಅವರ ಸಾವಿಗೆ ದೊಡ್ಡಪ್ಪನ ಮಕ್ಕಳು ಕಾರಣ’ ಎಂದು ಫೇಸ್‌ಬುಕ್‌ನಲ್ಲಿ ರಘುನಾಥ ಬರೆದುಕೊಂಡಿದ್ದರು.

‘ಫೇಸ್‌ಬುಕ್‌ನಲ್ಲಿ ಹಾಕಿದ್ದ ಬರಹ ತೆಗೆದು ಹಾಕುವಂತೆ ಸಂಬಂಧಿಕರು ಎಚ್ಚರಿಕೆ ನೀಡಿದ್ದರು. ಆದರೆ, ಅದನ್ನು ತೆಗೆದಿರಲಿಲ್ಲ. ಇದರಿಂದ ಸಿಟ್ಟಿಗೆದ್ದಿದ್ದ ಸಂಬಂಧಿಕರಾದ ಸತೀಶ್‌, ಅವಿನಾಶ ಸ್ನೇಹಿತರ ಜತೆಗೆ ಸೇರಿ ಶಹಬಾದ್‌ನ ಜೆ.‍ಪಿ ಕಾಲೊನಿಯಲ್ಲಿ ಹಲ್ಲೆ ನಡೆಸಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಲಾಡ್ಜ್ ಮಾಲೀಕ ಆತ್ಮಹತ್ಯೆ

ಕಲಬುರ್ಗಿ:
ಇಲ್ಲಿನ ಗಾಜಿಪುರದ ವಿಜಯಾ ಲಾಡ್ಜ್‌ನ ಮಾಲೀಕ ಜಗದೀಶ ಮುನ್ನೊಳ್ಳಿ(55) ಗುರುವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry