6
ಈಶಾನ್ಯ ವಲಯ ಪದವೀಧರ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಪ್ರತಾಪ ರೆಡ್ಡಿ ಆರೋಪ

‘ನೌಕರರ ಸಮಸ್ಯೆಗೆ ಸಿಗದ ಸ್ಪಂದನೆ’

Published:
Updated:

ಬೀದರ್‌: ‘ಸರ್ಕಾರಿ ನೌಕರರು ಹಾಗೂ ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುವ  ಉದ್ದೇಶದಿಂದ ವಿಧಾನ ಪರಿಷತ್‌ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದು, ಪದವೀಧರರು ಬೆಂಬಲ ನೀಡಬೇಕು’ ಎಂದು ಈಶಾನ್ಯ ವಲಯ ಪದವೀಧರ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಪ್ರತಾಪ ರೆಡ್ಡಿ ಮನವಿ ಮಾಡಿದರು.

‘ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್‌) ಭದ್ರತೆ ಯಿಲ್ಲದ ಯೋಜನೆಯಾಗಿದೆ. ಹಳೆಯ ಪಿಂಚಣಿ ಯೋಜನೆಯನ್ನು ಮುಂದುವರಿ ಸುವಂತೆ ಸರ್ಕಾರಿ ನೌಕರರು ಮನವಿ ಮಾಡಿದರೂ ಸರ್ಕಾರ ಸ್ಪಂದಿಸುತ್ತಿಲ್ಲ’ ಎಂದು ನಗರದಲ್ಲಿ ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಆರೋಪಿಸಿದರು.

‘ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರಿ ನೌಕರರ ವೇತನಕ್ಕೆ ಸರಿಸಮನಾದ ವೇತನ ಕೊಡಬೇಕು. ಹೈದರಾಬಾದ್ ಕರ್ನಾಟಕದ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯ ಸರ್ಕಾರಿ ನೌಕರರರಿಗೆ ಸಿ ಅಂಡ್ ಆರ್‌ ರೋಲ್‌ ಪ್ರತ್ಯೇಕವಾಗಿ ಮಾಡಬೇಕು. 371(ಜೆ) ಅನುಷ್ಠಾನ ಸಮಿತಿ ಕಲಬುರ್ಗಿಯಲ್ಲಿ ನೆಲಸುವಂತೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಹೈದರಾಬಾದ್‌ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ₹ 1,500 ಕೋಟಿ ಅನುದಾನ ಬಂದರೂ ಅದರಲ್ಲಿ ₹ 350 ಕೋಟಿಯಿಂದ ₹ 400 ಕೋಟಿ ಮಾತ್ರ ಖರ್ಚಾಗುತ್ತಿದೆ.ಹೈದರಾಬಾದ್‌ ಕರ್ನಾಟಕದಲ್ಲಿ 40 ಸಾವಿರ ಹುದ್ದೆಗಳು ಖಾಲಿ ಇವೆ. ಹೊಸ ಸಿಬ್ಬಂದಿ ನೇಮಕಾತಿ ಮಾಡದ ಕಾರಣ ಇರುವ ಸಿಬ್ಬಂದಿ ಮೇಲೆ ಕೆಲಸದ ಒತ್ತಡ ಹೆಚ್ಚಿದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry