ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸುರತ್ಕಲ್ ಸಮಗ್ರ ಅಭಿವೃದ್ಧಿಗೆ ಯೋಜನೆ’

₹125 ಕೋಟಿ ಅಭಿವೃದ್ಧಿ ಕಾಮಗಾರಿಗೆ ಶಾಸಕರಿಂದ ಶಂಕುಸ್ಥಾಪನೆ
Last Updated 16 ಮಾರ್ಚ್ 2018, 9:58 IST
ಅಕ್ಷರ ಗಾತ್ರ

ಸುರತ್ಕಲ್: ಸುರತ್ಕಲ್ ಪ್ರದೇಶವನ್ನು ಭವಿಷ್ಯದಲ್ಲಿ ಸಮಗ್ರ ಅಭಿವೃದ್ಧಿಯ ನಗರವಾಗಿ ಪರಿವರ್ತಿಸುವ ಯೋಜನೆ ರೂಪುಗೊಳ್ಳುತ್ತಿದ್ದು, ವಿವಿಧ ಹಂತದಲ್ಲಿ ಅಭಿವೃದ್ಧಿ ಕೆಲಸವನ್ನು ಕೈಗೆತ್ತಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಸುರತ್ಕಲ್‌ಗೆ ಹೊಸ ಮಾರುಕಟ್ಟೆಯು ಮೊದಲ ಹಂತದ ಕಾರ್ಯವಾಗಿದೆ ಎಂದು ಶಾಸಕ ಮೊಯಿದ್ದೀನ್ ಬಾವಾ ತಿಳಿಸಿದರು.

ಸುರತ್ಕಲ್‍ನಲ್ಲಿ ₹125 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಗುರುವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಸುರತ್ಕಲ್‍ನ ಅಭಿ ವೃದ್ಧಿಗೆ ವಿರೋಧಪಡಿಸುವ ಕೆಲಸವೂ ಕೆಲವರಿಂದ ನಡೆದಿದ್ದು, ಇದ್ಯಾವುದನ್ನೂ ಪರಿಗಣಿಸದೇ ನನ್ನ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವುದು ನನ್ನ ಗುರಿ. ಸುರತ್ಕಲ್ ಕೈಗಾರಿಕೆಗಳ ಕೇಂದ್ರ ಸ್ಥಾನವಾಗುತ್ತಿದ್ದು, ಉದ್ಯೋಗ ಸೃಷ್ಟಿಯಲ್ಲಿ ಅಗ್ರಸ್ಥಾನವನ್ನು ಅಲಂ ಕರಿಸುತ್ತಿದೆ. ಅಭಿವೃದ್ಧಿಯ ನಗರ ವಾಗುತ್ತಿರುವ ಸುರತ್ಕಲ್‌ಗೆ ಮೂಲ ಸೌಕರ್ಯವನ್ನೂ ಅಭಿವೃದ್ಧಿಪಡಿ ಸಬೇಕಾಗಿದೆ’ ಎಂದು ತಿಳಿಸಿದರು.

ಸುರತ್ಕಲ್ ಮಾರುಕಟ್ಟೆ ಸಂಕೀರ್ಣ, ಸುರತ್ಕಲ್ ಗಣೇಶಪುರ ಮುಖ್ಯರಸ್ತೆ, ಗುಡ್ಡೆಕೊಪ್ಲ ರಸ್ತೆ ವಿಸ್ತರಣೆ, ಅದೇ ರೀತಿ ಇತರ ಅಭಿವೃದ್ಧಿ ಕೆಲಸಗಳಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು. ಸಮಾರಂಭದಲ್ಲಿ ಫಾದರ್ ಪೌಲ್ ಪಿಂಟೋ, ಚೊಕ್ಕಬೆಟ್ಟು ಮಸೀದಿಯ ಧರ್ಮಗುರುಗಳಾದ ಅಕ್ಬರ್ ಮಿಸ್ಬಾಹಿ, ಪಾಲಿಕೆ ಸದಸ್ಯೆ ಪ್ರತಿಭಾ ಕುಳಾಯಿ ಉಪಸ್ಥಿತರಿದ್ದರು.

ಶಾಸಕರ ಜನ್ಮ ದಿನಾಚರಣೆ ಶಂಕುಸ್ಥಾಪನಾ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಕಾರ್ಯಕರ್ತರು ಮತ್ತು ಬ್ಲಾಕ್ ಕಾಂಗ್ರೆಸ್ ಸಮಿತಿ ಸದಸ್ಯರು ಶಾಸಕರ ಜನ್ಮದಿನ ಆಚರಿಸಿದರು. ಬಳಿಕ ಸ್ಥಳೀಯ ಶಾಲಾ ಮಕ್ಕಳಿಗೆ ಪುಸ್ತಕ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT