ಕಟ್ಟಿಮನಿಗೆ ಸಿ.ಎಂ ಚಿನ್ನದ ಪದಕ

7

ಕಟ್ಟಿಮನಿಗೆ ಸಿ.ಎಂ ಚಿನ್ನದ ಪದಕ

Published:
Updated:
ಕಟ್ಟಿಮನಿಗೆ ಸಿ.ಎಂ ಚಿನ್ನದ ಪದಕ

ಹುಬ್ಬಳ್ಳಿ: ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ಚಿನ್ನದ ಪದಕ ಗೌರವ ಘೋಷಿಸಲಾಗಿದೆ. ತರಬೇತಿ ಕ್ಷೇತ್ರದಲ್ಲಿ ಧಾರವಾಡ ಗುಂಗರಗಟ್ಟಿ ತರಬೇತಿ ಸಂಸ್ಥೆಯ ಉಪವಲಯ ಅರಣ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ ಅವರು ಚಿನ್ನದ ಪದಕ ಗೌರವಕ್ಕೆ ಪಾತ್ರರಾಗಿದ್ದಾರೆ.

ವಿಜಯಪುರದ ಇಂಡಿ ತಾಲ್ಲೂಕಿನ ಬರಡೋಲ ಗ್ರಾಮದವರಾದ ಲಕ್ಷ್ಮಣ ಪರಸಪ್ಪ ಕಟ್ಟಿಮನಿ, ಪ್ರಸ್ತುತ ಗುಂಗರಗಟ್ಟಿಯ ರಾಜ್ಯ ಅರಣ್ಯ ಅಕಾಡೆಮಿಯಲ್ಲಿ ಬೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಅಭಿವೃದ್ಧಿ ಕ್ಷೇತ್ರದಲ್ಲಿ ಧಾರವಾಡ ಸಾಮಾಜಿಕ ಅರಣ್ಯ ವಿಭಾಗದ ವಲಯ ಅರಣ್ಯಾಧಿಕಾರಿ ಬಿ.ಕೆ. ಡಬಾಲಿ, ಅರಣ್ಯ ರಕ್ಷಣೆ ಕ್ಷೇತ್ರದಲ್ಲಿ ಧಾರವಾಡ ವಿಭಾಗದ ಉಪವಲಯ ಅರಣ್ಯಾಧಿಕಾರಿ ಎಂ.ಡಿ. ಲಮಾಣಿ ಅವರೂ ಮುಖ್ಯಮಂತ್ರಿ ಚಿನ್ನದ ಪದಕ ಗೌರವಕ್ಕೆ ಪಾತ್ರರಾಗಿದ್ದಾರೆ.

ಮಾರ್ಚ್‌ 21ರಂದು ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry