‘ಭಯವಿಲ್ಲದೇ ಪರೀಕ್ಷೆಗಳನ್ನು ಎದುರಿಸಿ’

7

‘ಭಯವಿಲ್ಲದೇ ಪರೀಕ್ಷೆಗಳನ್ನು ಎದುರಿಸಿ’

Published:
Updated:

ಬ್ಯಾಡಗಿ: ‘ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಗಳು ಯಾವುದೇ ಭಯವಿಲ್ಲದೇ ವಾರ್ಷಿಕ ಪರೀಕ್ಷೆಗಳನ್ನು ಎದುರಿಸಬೇಕು’ ಎಂದು ನಿವೃತ್ತ ಸಹಾಯಕ ಶಿಕ್ಷಣಾಧಿಕಾರಿ ಬಿ.ಎಚ್‌.ಬಡ್ಡಿಯವರ ಹೇಳಿದರು.

ಪಟ್ಟಣದ ಬಿಇಎಸ್‌ ಪ್ರೌಢಶಾಲೆ ಯಲ್ಲಿ ಮಂಗಳವಾರ ನಡೆದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳು ಕಠಿಣ ವಿಷಯ ಗಳನ್ನು ಹತ್ತಾರು ಬಾರಿ ಬರೆದು ಮನನ ಮಾಡಿಕೊಳ್ಳಬೇಕು. ಕ್ರಮಬದ್ಧವಾಗಿ ಅಭ್ಯಾಸದಲ್ಲಿ ನಿರತರಾದರೆ ನೆನಪಿನಲ್ಲಿ ಇಟ್ಟುಕೊಳ್ಳಲು ಸಾಧ್ಯವಿದೆ. ಟಿವಿ ಹಾಗೂ ಮೊಬೈಲ್‌ನಿಂದ ದೂರವಿದ್ದು ಏಕಾಗ್ರತೆ ಸಾಧಿಸಬೇಕು’ ಎಂದು ಸಲಹೆ ನೀಡಿದರು.

ಸಂಸ್ಥೆಯ ಕಾರ್ಯದರ್ಶಿ ಮುರಳೀಧರ ಜೋಶಿ ಮಾತನಾಡಿ, ನಿರಂತರ ಅಭ್ಯಾಸದಿಂದ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯವಿದೆ ಎಂದರು.

ಮುಖ್ಯ ಶಿಕ್ಷಕ ಎನ್‌.ಎಂ.ಉಮಾಪತಿ, ಸಹನಾ ಶೀಗಿಹಳ್ಳಿ, ಎಚ್‌.ಛಾಯಾ, ಸ್ನೇಹಾ ಇಮ್ಮಡಿ, ಬಸವರಾಜ ಮರಿಯಪ್ಪನವರ, ದಾನೇಶ ಮಾತನಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry